×
Ad

ಮುಂಬೈ:ಎರಡು ಬಸ್, ಆಟೋ ರಿಕ್ಷಾ ನಡುವೆ ಡಿಕ್ಕಿ, ಇಬ್ಬರು ಮೃತ್ಯು, ಓರ್ವನಿಗೆ ಗಾಯ

Update: 2023-07-02 13:04 IST

ಮುಂಬೈ: ಪೂರ್ವ ಎಕ್ಸ್ ಪ್ರೆಸ್ ಹೆದ್ದಾರಿಯ ಗೋರೆಗಾಂವ್ ಚೆಕ್ ನಾಕಾ ಸೇತುವೆಯ ಬಳಿ ರವಿವಾರ ಮುಂಜಾನೆ ಎರಡು ಸರಕಾರಿ(ಬೆಸ್ಟ್) ಬಸ್ ಗಳು ಹಾಗೂ ಆಟೋ ರಿಕ್ಷಾ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಒಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಜಾನಿ ಸಂಖರಾಮ್ (42 ವರ್ಷ) ಮತ್ತು ಸುಜಾತಾ ಪಂಚಕಿ (38 ವರ್ಷ) ಎಂದು ಗುರುತಿಸಲಾಗಿದೆ. ಆಟೋರಿಕ್ಷಾ ಚಾಲಕನ ಎಡ ಕೆನ್ನೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪ್ರಾಥಮಿಕ ವರದಿಗಳ ಪ್ರಕಾರ, ಬಸ್ ಗಳು ಪೊಯಿಸರ್ ಡಿಪೋದಿಂದ ಘಾಟ್ಕೋಪರ್ ಡಿಪೋಗೆ ಹೋಗುತ್ತಿದ್ದವು. ಆಗ ಒಂದು ಬಸ್ಸಿನ ಚಾಲಕ ಬ್ರೇಕ್ ಹಾಕಿದ್ದು, ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಬಸ್ ಡಿಕ್ಕಿ ಹೊಡೆದಿದೆ. ನಂತರ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಬಸ್ ಡಿಕ್ಕಿ ಹೊಡೆದವು.

ನಾಗ್ಪುರ: ರೈಲು ಹಳಿ ಮೇಲೆ ಬಿದ್ದ ಕಾರು, ಐವರಿಗೆ ಗಾಯ

ಇನ್ನೊಂದು ಘಟನೆಯೊಂದರಲ್ಲಿ ನಾಗ್ಪುರದ ಬೋರ್ಖೇಡಿ ಮೇಲ್ಸೇತುವೆಯಿಂದ ವೇಗವಾಗಿ ಬಂದ ಕಾರು ರೈಲು ಹಳಿ ಮೇಲೆ ಬಿದ್ದಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಗಾಯಗೊಂಡಿದ್ದು, ಅವರನ್ನು ನಂತರ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬುಟಿಬೊರಿ ಪೊಲೀಸರು ಸುದ್ದಿಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News