×
Ad

ನೀವೇ ನಾಶವಾಗದಂತೆ ಜಾಗರೂಕರಾಗಿರಿ: ಟ್ರಂಪ್‌ಗೆ ಇರಾನ್‌ನ ಉನ್ನತ ಭದ್ರತಾ ಅಧಿಕಾರಿ ಲಾರಿಜಾನಿ ಎಚ್ಚರಿಕೆ

"ನಿಮಗಿಂತ ಶಕ್ತಿಶಾಲಿಗಳಿಗೂ ಇರಾನ್ ಅನ್ನು ನಾಶಮಾಡಲು ಸಾಧ್ಯವಾಗಲಿಲ್ಲ"

Update: 2026-03-10 21:06 IST
ಅಲಿ ಲಾರಿಜಾನಿ - Photo : AP

ದುಬೈ: ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಉದ್ವಿಗ್ನತೆ ತೀವ್ರಗೊಳ್ಳುತ್ತಿದ್ದಂತೆ ಇರಾನ್‌ನ ಉನ್ನತ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಅಲಿ ಲಾರಿಜಾನಿ, ತ್ಯಾಗಮಯ ಇರಾನ್ ಜನತೆ ನಿಮ್ಮ ಬೆದರಿಕೆಗಳಿಗೆ ಭಯಪಡುವುದಿಲ್ಲ. ನಿಮಗಿಂತ ಶಕ್ತಿಶಾಲಿಗಳಿಗೂ ಇರಾನ್ ಅನ್ನು ನಾಶಮಾಡಲು ಸಾಧ್ಯವಾಗಲಿಲ್ಲ. ನೀವೇ ನಾಶವಾಗದಂತೆ ಜಾಗರೂಕರಾಗಿರಿ ಎಂದು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ರಕ್ಷಣೆಯೊಂದಿಗೆ ಸಾಗುತ್ತಿರುವ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದರೆ ಅದರ ಪರಿಣಾಮಗಳು ಲೆಕ್ಕ ಹಾಕಲಾಗದಷ್ಟು ಗಂಭೀರವಾಗಿರುತ್ತವೆ ಎಂದು ಈ ಮೊದಲು ಟ್ರಂಪ್ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೆ ಲಾರಿಜಾನಿ ಈ ಹೇಳಿಕೆಯನ್ನು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News