×
Ad

ಯಾದಗಿರಿ | ಕೃಷ್ಣಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನೀರುಪಾಲು

Update: 2024-11-04 18:17 IST

ಯಾದಗಿರಿ : ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಜವಳ ಕಾರ್ಯಕ್ರಮಕ್ಕೆ ಆಗಮಿಸಿದ ಯುವಕ ಕೃಷ್ಣ ನದಿಯಲ್ಲಿ ಸ್ನಾನ ಮಾಡಲು ಹೋಗಿ ನೀರು ಪಾಲು ಆಗಿರುವ ಘಟನೆ ಸೋಮವಾರ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಕುನೂರ್ ತಾಲ್ಲೂಕಿನ ಮಂಗಳೂರ ನಿವಾಸಿ ಮಂಗಳೇಶ್ ತಂದೆ ವಿರುಪಣ್ಣ ಬಡಿಗೇರ್ (26) ಮೃತ ದುರ್ದೈವಿ. ಇಂದು ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಸಂಬಂಧಿಕರ ಜವಳ ಕಾರ್ಯಕ್ರಮಕ್ಕೆ ಬಂದು ತಿಂಥಣಿ ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಸತತ ಮೂರು ಗಂಟೆ ಅಗ್ನಿಶಾಮಕದಳ ಮತ್ತು ಸುರಪುರ ಪೊಲೀಸ್ ಠಾಣೆಯ ಶಿವರಾಜ್ ಪಾಟೀಲ್, ಕಿರದಳ್ಳಿ ಪಿಎಸ್ಐ ಸರ್ ಅವರ ನೇತೃತ್ವದಲ್ಲಿ ಹಾಗೂ ತಿಂಥಣಿ ಗ್ರಾಮದ ಅಂಬಿಗರರಾದ ಬೈರಣ್ಣ, ಸೋಮನಾಥ್ ಮೌನೇಶ, ಗಂಗಪ್ಪ, ಹಣಮಂತ, ರಾಮು ವೀರ್ ಗೊಟ ನದಿಯಲ್ಲಿ ಮುಳುಗಿದ ಮೃತದೇಹವನ್ನುಹೊರ ತೆಗೆಯಲು ಹರಸಹಾಸ ಪಟ್ಟು ಮೃತದೇಹವನ್ನು ಹೊರ ತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News