×
Ad

ದಟ್ಟ ಮಂಜು| ದಿಲ್ಲಿ ವಿಮಾನ ನಿಲ್ದಾಣದಿಂದ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

Update: 2025-12-20 14:18 IST

Photo| ANI Video Grab

ಹೊಸ ದಿಲ್ಲಿ: ಶನಿವಾರ ಉತ್ತರ ಭಾರತದಾದ್ಯಂತ ದಟ್ಟ ಮಂಜು ಆವರಿಸಿರುವುದರಿಂದ ಗೋಚರತೆಯ ಪ್ರಮಾಣ ಕ್ಷೀಣಿಸಿದ್ದು, ಇದರ ಪರಿಣಾಮವಾಗಿ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿದೆ.

ದಟ್ಟ ಮಂಜು ಆವರಿಸಿರುವುದರಿಂದಾಗಿ 66 ವಿಮಾನಗಳ ಆಗಮನ ಹಾಗೂ 63 ವಿಮಾನಗಳ ನಿರ್ಗಮನ ರದ್ದುಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಭಾರತದಾದ್ಯಂತ ದಟ್ಟ ಮಂಜು ಆವರಿಸಿರುವುದರಿಂದ ಗೋಚರತೆಯ ಪ್ರಮಾಣ ಕ್ಷೀಣಿಸಿದ್ದು, ಕೆಲ ವಿಮಾನಗಳ ಹಾರಾಟ ರದ್ದುಗೊಂಡಿದೆ. ಆದ್ದರಿಂದ ವಿಮಾನ ಯಾನ ಸಂಸ್ಥೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ  ಪ್ರಯಾಣಿಕರಿಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಸಲಹೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News