ಮಟ್ಕಾ: ಓರ್ವ ಆರೋಪಿ ವಶಕ್ಕೆ
Update: 2025-10-07 20:47 IST
ಬ್ರಹ್ಮಾವರ, ಅ.7: ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಗಾಂಧಿನಗರದ ಬಸ್ ನಿಲ್ದಾಣದ ಬಳಿ ಅ.7ರಂದು ಮಧ್ಯಾಹ್ನ ವೇಳೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಓರ್ವನನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ಕುದಿ ಗ್ರಾಮದ ಕುಂಜೂರಿನ ಕುಮಾರ ಹೆಗ್ಡೆ(59) ಎಂದು ಗುರುತಿಸಲಾಗಿದೆ. ಈತ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ಹಣವನ್ನು ಕರ್ಜೆಯ ಸಂತೋಷ್ ಶೆಟ್ಟಿಗೆ ನೀಡುವುದಾಗಿ ತಿಳಿಸಿದ್ದಾನೆ. ಆರೋಪಿಯಿಂದ 815ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.