ಮತದಾರರ ದಿನ: ಉಡುಪಿಯ ನವ್ಯಶ್ರೀಗೆ ರಾಜ್ಯಮಟ್ಟದ ಪ್ರಶಸ್ತಿ
Update: 2026-01-31 21:38 IST
ಉಡುಪಿ: 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ -2026 ಅಂಗವಾಗಿ ‘ಶಾಲೆಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ಗಳ ಮಹತ್ವ’ ಎಂಬ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಬ್ರಹ್ಮಾವರ ಕೆಪಿಎಸ್‌ನ ವಿದ್ಯಾರ್ಥಿನಿ ನವ್ಯಶ್ರೀ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳಲ್ಲಿ ವಿಜೇತಳಾಗಿ ಅಂತಿಮ ಹಂತದಲ್ಲಿ 33 ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸಿದ್ದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನವ್ಯಶ್ರೀ ದ್ವಿತೀಯ ಸ್ಥಾನ ಪಡೆದಿದ್ದಳು.
ಬೆಂಗಳೂರಿನ ಪುರಭವನದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದಥಾವರಚಂದ್ ಗೆಹ್ಲೋಟ್ ಇವರಿಂದ ಪ್ರಶಸ್ತಿ ಪತ್ರ ನಗದು ಪುರಸ್ಕಾರವನ್ನು ನವ್ಯಶ್ರೀ ಸ್ವೀಕರಿಸಿದರು. ನವ್ಯಶ್ರೀ ಬೈಕಾಡಿಯ ಅಶೋಕ್ ಶೆಟ್ಟಿಗಾರ್ ಹಾಗೂ ಸುಧಾ ದಂಪತಿಗಳ ಪುತ್ರಿ.