ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ
Update: 2026-01-31 20:41 IST
ಹೆಬ್ರಿ, ಜ.31: ಅನಾರೋಗ್ಯ ಹಾಗೂ ಇತ್ತೀಚೆಗೆ ಮೃತಪಟ್ಟ ಸಹೋದರನ ಬಗ್ಗೆ ಮಾನಸಿಕವಾಗಿ ನೊಂದ ಹೆಬ್ರಿ ಮದಗ ಹಿಂದುಗಡೆ ಮೂರು ರಸ್ತೆ ನಿವಾಸಿ ಶ್ರೇಯಾ ವಿ.ಹೆಗ್ಡೆ(55) ಎಂಬವರು ಜ.30ರಂದು ಬೆಳಗ್ಗೆ ಮನೆಯ ಬಾತ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ಅನಾರೋಗ್ಯದಿಂದ ಕೋಟತಟ್ಟು ಗ್ರಾಮದ ಬಸವ ಪೂಜಾರಿ (79) ಬಳಲುತ್ತಿದ್ದ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಜ.30ರಂದು ರಾತ್ರಿ ಕೋಟತಟ್ಟು ಗ್ರಾಮದ ರಾಮ ಮಂದಿರ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.