×
Ad

ಉಡುಪಿ ಜಿಲ್ಲೆಯ ವಿವಿಧೆಡೆ ಖಾದಿ ಉಡುಪುಗಳ ತಾತ್ಕಾಲಿಕ ಮಾರಾಟ ಮಳಿಗೆ ಪ್ರಾರಂಭ

Update: 2026-03-07 19:28 IST

ಉಡುಪಿ, ಮಾ.7: ರಾಜ್ಯ ಸರಕಾರ ಖಾದಿ ಉಡುಪುಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಸಂಸ್ಥೆಗಳು, ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳ ಅಧಿಕಾರಿ ಹಾಗೂ ನೌಕರರು ಸ್ವಯಂಪ್ರೇರಣೆಯಿಂದ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಬಟ್ಟೆ ಧರಿಸುವಂತೆ ಹಾಗೂ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ಎಲ್ಲಾ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಖಾದಿ ಉಡುಪನ್ನು ಧರಿಸುವಂತೆ ಇಲಾಖೆಗಳ ಅಧಿಕಾರಿ/ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದೆ.

ಅದರಂತೆ ಸರಕಾರಿ ನೌಕರರಿಗೆ ತಕ್ಷಣದ ಖಾದಿ ಬಟ್ಟೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಾರ್ಚ್ 9ರಿಂದ 14ರವರೆಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜಿಲ್ಲೆಯ ಈ ಕೆಳಕಂಡ ಸ್ಥಳಗಳಲ್ಲಿ ರೂರಲ್ ರಿಸೋರ್ಸಸ್ ಡೆವಲಪ್‌ಮೆಂಟ್ ಅಸೋಸಿಯೇಷನ್ ಬೆಂಗಳೂರು ಸಂಸ್ಥೆಯ ವತಿಯಿಂದ ತಾತ್ಕಾಲಿಕ ಮಳಿಗೆ ಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಲು ವ್ಯವಸ್ಥೆ ಮಾಡಲಾಗಿದೆ.

ಮಾ.9 ಮತ್ತು 10 ರಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಮಾ.11ರಂದು ಬ್ರಹ್ಮಾವರ ಬಿ.ಆರ್.ಸಿ ಕಚೇರಿ ಆವರಣ, ಮಾ.12 ರಂದು ಕುಂದಾಪುರ ಸರ್ಕಾರಿ ನೌಕರರ ಭವನ, ಮಾ.13 ರಂದು ಕಾರ್ಕಳ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ಕಾರಿ ನೌಕರರ ಭವನ ಹಾಗೂ ಮಾ.14ರಂದು ಬೈಂದೂರು ತಾಲೂಕು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಮಳಿಗೆ ಗಳನ್ನು ತೆರೆಯಲಾಗುತ್ತಿದೆ. ತಾತ್ಕಾಲಿಕ ವ್ಯವಸ್ಥೆಯ ಉಪಯೋಗ ಪಡೆದು, ಖಾದಿ ಉದ್ದಿಮೆಯನ್ನು ಉತ್ತೇಜಿಸು ವಂತೆ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News