×
Ad

ಬೈಂದೂರು: ಮನೆಗೆ ನುಗ್ಗಿ ನಗ ನಗದು ಕಳವು

Update: 2026-03-06 20:50 IST

ಬೈಂದೂರು, ಮಾ.6: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಯ ಮೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಪಡುವರಿ ಗ್ರಾಮದಲ್ಲಿರುವ ಗುರುಕಿರಣ್(42) ಎಂಬವರ ಮನೆಗೆ ಮಾ.5ರಂದು ಬೆಳಗ್ಗೆ ಯಾರು ಇಲ್ಲದ ವೇಳೆ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಗೊಡ್ರೇಜ್‌ನಲ್ಲಿ ಇರಿಸಿದ್ದ ಒಟ್ಟು ಸುಮಾರು 63 ಗ್ರಾಂ ತೂಕದ ಸುಮಾರು 5 ಲಕ್ಷ ಮೌಲ್ಯದ ಚಿನ್ನದ ಚೈನ್ ರಿಂಗ್ ಕೀ ಒಲೆ ಬ್ರಾಸ್ ಲೈಟ್ ಪೆಂಡೆಂಟ್ ಮತ್ತು ನಗದು 20000ರೂ. ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ 520000ರೂ. ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News