×
Ad

ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾಗಿ ಮೆಲ್ವಿನ್ ಆರಾನ್ಹಾ

Update: 2026-03-08 19:50 IST

ಉಡುಪಿ, ಮಾ.8: ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೆಲ್ವಿನ್ ಆರಾನ್ಹಾ ಶಿರ್ವಾ ಆಯ್ಕೆಯಾಗಿದ್ದಾರೆ.

ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ರವಿವಾರ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕೇಂದ್ರದ ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಚುನಾವಣಾಧಿಕಾರಿಯಾಗಿದ್ದು, ವಲೇರಿಯನ್ ಫೆರ್ನಾಂಡಿಸ್ ಚುನಾವಣಾ ವೀಕ್ಷಕರಾಗಿದ್ದರು.

ನೂತನ ಪದಾಧಿಕಾರಿಗಳ ವಿವರ ಇಂತಿದೆ. ಆಧ್ಯಾತ್ಮಿಕ ನಿರ್ದೇಶಕರಾಗಿ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟ ಪೂರ್ವ ಅಧ್ಯಕ್ಷರಾಗಿ ರೊನಾಲ್ಡ್ ಆಲ್ಮೇಡಾ ಉದ್ಯಾವರ, ನಿಯೋಜಿತ ಅಧ್ಯಕ್ಷರಾಗಿ ಲೂವಿಸ್ ಡಿಸೋಜ ಸಾಸ್ತಾನ, ಉಪಾಧ್ಯಕ್ಷರಾಗಿ ವಿಲ್ಸನ್ ಮಸ್ಕರೇನ್ಹಸ್ ಕಾರ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಜುಲಿಯೆಟ್ ಡಿಸೋಜ ಪಾಂಗಾಳ, ಸಹ ಕಾರ್ಯದರ್ಶಿಯಾಗಿ ಸೋನು ಸಿಕ್ವೇರಾ ಕಾರ್ಕಳ, ಕೋಶಾಧಿಕಾರಿಯಾಗಿ ಗ್ಯಾರಿಫಿಲ್ಡ್ ಉರ್ಬಾನ್ ಲೂವಿಸ್ ಬ್ರಹ್ಮಾವರ, ಸಹ ಕೋಶಾಧಿಕಾರಿಯಾಗಿ ಪ್ರತೀಮಾ ಡಿಸೋಜ ಕಾರ್ಕಳ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News