×
Ad

ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದಕ್ಕೆ ತಲವಾರು ದಾಳಿ ಯತ್ನ ಆರೋಪ; ಪ್ರಕರಣ ದಾಖಲು

Update: 2026-03-08 20:43 IST

ಕಾರ್ಕಳ, ಮಾ.8: ನ್ಯಾಯಾಲಯದಲ್ಲಿ ಸಾಕ್ಷಿ ನುಡಿದ ಕಾರಣಕ್ಕಾಗಿ ತಲವಾರು ಬೀಸಿ ಕೊಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಮಾ.6ರಂದು ರಾತ್ರಿ ವೇಳೆ ನೀರೆ ಗ್ರಾಮದ ಬೈಲ್ಲೂರು ಪಂಚಾಯತ್ ಕಟ್ಟಡದ ಎದುರುಗಡೆ ನಡೆದಿದೆ.

ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ರಾಜೇಂದ್ರ ಎಂಬವರು ಸಾಕ್ಷ್ಯ ನುಡಿದಿ ದ್ದರು. ಈ ಕಾರಣಕ್ಕೆ ಈ ಪ್ರಕರಣದ ಆರೋಪಿ ಗಣೇಶ ಪೂಜಾರಿ ಎಂಬಾತ ಕಾರಿನಲ್ಲಿ ಬಂದು ರಾಜೇಂದ್ರ ಅವರ ಪತ್ನಿ ಪುಪ್ಪಲತಾ (34) ಎಂಬವರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿದರು.

ಬಳಿಕ ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿದ್ದ ತಲವಾರು ಬೀಸಿದ್ದು, ಬಳಿಕ ದಂಪತಿಗೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರೇ ಕೊಚ್ಚಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದದಿಂದ ಬೈದಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News