ಯುವ ಪೀಳಿಗೆಗೆ ಯೋಗ್ಯ ಸಂಗಾತಿಪಡೆಯುವುದು ದೊಡ್ಡ ಸವಾಲು: ನಾಗೇಂದ್ರ ಕಾಮತ್
ಶಿರ್ವ, ಮೇ 18: ಇಂದಿನ ಆಧುನಿಕ ಯುಗದಲ್ಲಿ ಯುವ ಪೀಳಿಗೆಗೆ ಯೋಗ್ಯ ಹಾಗೂ ಒಪ್ಪುವಂತಹ ಜೀವನ ದೊರೆಯನ್ನು ಕಂಡುಕೊಳ್ಳುವುದು ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಆಯೋಜನೆಗೊಳ್ಳುವ ವಧುವರರ ಸಮಾವೇಶಗಳು ಯುವಜನತೆಯ ಸುಂದರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡುತ್ತವೆ ಎಂದು ಬೆಂಗಳೂರು ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ಅಧ್ಯಕ್ಷ ನಾಗೇಂದ್ರ ಕಾಮತ್ ಹೇಳಿದ್ದಾರೆ.
ಬಂಟಕಲ್ಲು ರೋಟರಿ ಭವನದಲ್ಲಿ ಆರ್‌ಎಸ್‌ಬಿ ಹಾಗೂ ಬಿಜಿಎಸ್‌ಬಿ ಸಮಾಜ ಬಾಂಧವರ ಜಂಟಿ ಆಯೋಜನೆಯಲ್ಲಿ ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ವತಿಯಿಂದ ರವಿವಾರ ಏರ್ಪಡಿಸಿದ ಋಣಾನುಬಂಧ ವಧುವರರ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಹಿರಿಯ ಜ್ಯೋತಿಷಿ ಮಾಣ್ಯೂರು ವೈ ಉಪೇಂದ್ರ ಪ್ರಭು ಉದ್ಘಾಟಿಸಿದರು. ತರಬೇತುದಾರ ಸುಬ್ರಹ್ಮಣ್ಯ ಕುಲೇದು ಸಮಾಜದ ಯುವಜನತೆಗೆ ಪ್ರೇರಣೆ ನೀಡುವ ವಿಶೇಷ ಉಪನ್ಯಾಸವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಹಿರ್ಗಾನ ಶ್ರೀಆದಿಶಕ್ತಿ ಮಹಾಲಕ್ಷ್ಮೀ ದೇವಳದ ಮಾಜಿ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ಉದ್ಯಮಿ ವಾಸುದೇವ ಕೃಷ್ಣ ಮಾತನಾಡಿದರು.
ಉದ್ಯಮಿ ಎಂ.ಎನ್.ನಾಯಕ್, ಸಂಚಾಲಕ ಎಂ.ಡಿ.ಪ್ರಭು ಉಪಸ್ಥಿತರಿದ್ದರು. ನಿವೃತ್ತ ಮುಖ್ಯಶಿಕ್ಷಕ ಚಂದ್ರಹಾಸ ಪ್ರಭು ಮುದರಂಗಡಿ ಪರಿಚಯಿಸಿದರು. ಸುನಿಲ್ ಬೋರ್ಕಾರ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಸರೋಜಿನಿ ಕೊಡಿಬೆಟ್ಟು ವಂದಿಸಿದರು.