ಮಹಾರುದ್ರಯಾಗ: ಮಲ್ಪೆ ಬೀಚ್‌ನಲ್ಲಿ ಭವ್ಯ ಗಂಗಾರತಿ
Update: 2026-05-17 21:49 IST
ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯುತ್ತಿರುವ ಮಹಾರುದ್ರ ಯಾಗದ ಅಂಗವಾಗಿ ಮಲ್ಪೆ ಬೀಚ್‌ನಲ್ಲಿ ರವಿವಾರ ಸಂಜೆ ಭವ್ಯ ಗಂಗಾರತಿ ಕಾರ್ಯಕ್ರಮ ಜರಗಿತು.
ಕಾಶಿಯಿಂದ ಆಗಮಿಸಿದ್ದ ಪುರೋಹಿತರು ವೇದಘೋಷ ಹಾಗೂ ಮಂತ್ರೋಚ್ಚಾರಣೆಯೊಂದಿಗೆ ಗಂಗಾರತಿ ನೆರವೇರಿಸಿದರು. ಮತ್ಸ್ಯಸಂಪತ್ತು ವೃದ್ಧಿಗಾಗಿ ಸಮುದ್ರರಾಜನಿಗೆ ವಿಶೇಷ ಆರತಿ ಮಾಡಲಾಯಿತು. ಸಮುದ್ರ ತೀರದಲ್ಲಿ ಆಕರ್ಷಕ ದೀಪಗಳೊಂದಿಗೆ ನಡೆದ ಗಂಗಾರತಿಯು ಭಕ್ತರ ಗಮನಸೆಳೆಯಿತು.
ಮಹಾರುದ್ರಯಾಗದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಲ್ಪೆ ಬೀಚ್‌ನಲ್ಲಿ ನಡೆದ ಗಂಗಾರತಿ ವಿಶೇಷ ಆಕರ್ಷಣೆಯಾಯಿತು. ಕಾರ್ಯಕ್ರಮದ ಸಂದರ್ಭದಲ್ಲಿ ಭಕ್ತರು ದೀಪಾರಾಧನೆ ಸಲ್ಲಿಸಿ ದೇವರ ಕೃಪೆಗೆ ಪ್ರಾರ್ಥಿಸಿದರು.