×
Ad

ನದಿಯಲ್ಲಿ ಮುಳುಗಿ ವ್ಯಕ್ತಿ ಮೃತ್ಯು

Update: 2026-05-25 20:55 IST

ಹಿರಿಯಡ್ಕ, ಮೇ 25: ಇಲ್ಲಿಗೆ ಸಮೀಪದ ಭಂಡಾರಿಬೆಟ್ಟು ಎಂಬಲ್ಲಿನ ಸುವರ್ಣ ನದಿಯಲ್ಲಿ ಮೇ 24ರಂದು ಮಧ್ಯಾಹ್ನ ವೇಳೆ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಬೊಮ್ಮಾರಬೆಟ್ಟು ಗ್ರಾಮದ ರಮೇಶ್ ನಾಯಕ್(62) ಎಂದು ಗುರುತಿಸಲಾಗಿದೆ. ಕೃಷಿ ಕೆಲಸ ಮಾಡಿ ಕೊಂಡಿದ್ದ ರಮೇಶ್ ನಾಯಕ್, ಸ್ನಾನಕ್ಕೆಂದು ಹೋದವರು ಆಕಸ್ಮಿಕವಾಗಿ ನದಿಯಲ್ಲಿ ಕಾಲು ಜಾರಿ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News