ಕಲಾಮ್ಸ್ ವರ್ಲ್ಡ್ ರೆಕಾರ್ಡ್ಸ್ ದಾಖಲಿಸಿದ ಬಾಲ ಪ್ರತಿಭೆ ಸಹಸ್ರ!
ಕಾರ್ಕಳ, ಮೇ 26: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಗ್ರಾಮದ ಮೂಲದ ಪ್ರಸ್ತುತ ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಸಂಗೀತ ಮತ್ತು ಸಿದ್ದು ಕೇಸಾಪುರ ದಂಪತಿಯ ಪುತ್ರಿ ಎರಡು ವರ್ಷದ ಮಗು ಸಹಸ್ರ ಎಸ್.ಕೇಸಾಪುರ ವಿಶಿಷ್ಟ ಪ್ರತಿಭೆಯಿಂದ ಕಲಾಮ್ಸ್ ವರ್ಲ್ಡ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಹಸ್ರ ಅಸಾಧಾರಣ ಗ್ರಹಿಕೆ ಶಕ್ತಿ, ನೆನಪಿನ ಸಾಮರ್ಥ್ಯ ಹಾಗೂ ವೇಗವಾಗಿ ಕಲಿಯುವ ಕೌಶಲ್ಯವನ್ನು ಪ್ರದರ್ಶಿಸಿ ದ್ದಾರೆ. ವಿವಿಧ ಫ್ಲ್ಯಾಶ್ ಕಾರ್ಡ್‌ಗಳು, ಪ್ರಾಣಿಗಳು, ಹಕ್ಕಿಗಳು, ಹಣ್ಣುಗಳು, ತರಕಾರಿಗಳು, ಬಣ್ಣಗಳು, ಸಂಖ್ಯೆಗಳು, ವಾರದ ದಿನಗಳು, ತಿಂಗಳುಗಳು, ದೇಹದ ಅಂಗಗಳು ಸೇರಿದಂತೆ ಅನೇಕ ವಿಷಯಗಳನ್ನು ಸುಲಭವಾಗಿ ಗುರುತಿಸಿ ಹೇಳುವ ಮೂಲಕ ತಮ್ಮ ವಿಶಿಷ್ಟ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಅತ್ಯಂತ ಸಣ್ಣ ವಯಸ್ಸಿನಲ್ಲೇ ಸಹಸ್ರ ಸಾಧನೆ ವಿಶೇಷವಾಗಿದ್ದು, ಈ ಸಾಧನೆಯನ್ನು ಗುರುತಿಸಿ ಕಲಾಮ್ಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯಿಂದ ವಿಶ್ವ ದಾಖಲೆ ಗೌರವ ನೀಡಿ ಸನ್ಮಾನಿಸಿದೆ.