×
Ad

ಬಾವಿಗೆ ಬಿದ್ದು ಮಹಿಳೆ ಮೃತ್ಯು

Update: 2026-06-05 21:14 IST

ಉಡುಪಿ, ಜೂ.3: ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜು ಸಮೀಪ ಎರಡು ದಿನಗಳ ಹಿಂದೆ ಅಕಸ್ಮಿಕವಾಗಿ ಮನೆಯ ಬಾವಿಗೆ ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡಿದ್ದ ದಂಪತಿಯ ಪೈಕಿ ಪತ್ನಿ ಶ್ಯಾಮಲಾ(60) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇವರು ಮನೆ ಸಮೀಪದ ಬಾವಿಯ ಬಳಿ ಬಟ್ಟೆ ಹೊಗೆಯುತ್ತಿದ್ದಾಗ ಬಾವಿಯಿಂದ ನೀರು ಸೇದಲು ಹೋಗಿದ್ದು, ಈ ವೇಳೆ ಅವರು ಅಕಸ್ಮಿಕವಾಗಿ ಬಾವಿಗೆ ಬಿದ್ದರೆನ್ನಲಾಗಿದೆ. ಇವರನ್ನು ರಕ್ಷಿಸಲು ಅವರ ಪತಿ ಗೋಪಾಲ ಕೃಷ್ಣ(65) ಬಾವಿಗೆ ಹಾರಿದರು. ಇದರಿಂದ ಇಬ್ಬರು ತೀವ್ರವಾಗಿ ಅಸ್ವಸ್ಥ ಗೊಂಡಿದ್ದು, ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News