ಪರಿಯಾಳ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯಧನ ವಿತರಣೆ
ಉಡುಪಿ, ಜೂ.13: ಸಂತ್ರಪ್ತಿ ಪರಿಯಾಳ ಬಳಗ ಮತ್ತು ಸಾಂತ್ವನ ಪರಿಯಾಳ ಬಳಗ ಉಡುಪಿ ಇವರ ಆಶ್ರಯದಲ್ಲಿ ಹರ್ಷ ಭಾರತಿ ಸೇವಾ ಟ್ರಸ್ಟ್ ಉಡುಪಿ ಇವರ ಪ್ರಯೋಜಕತ್ವದಲ್ಲಿ ಉಡುಪಿ ಮತ್ತು ದ. ಕ. ಜಿಲ್ಲೆಯ ಪರಿಯಾಳ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯ ಧನ ಹಾಗೂ ಸ್ಕೂಲ್ ಬ್ಯಾಗ್ ವಿತರಣೆ ಮತ್ತು ಸಂಸ್ಕಾರ, ಸಂಸ್ಕೃತಿ ಪ್ರಸ್ತುತಿ ಕಾರ್ಯಕ್ರಮವನ್ನು ಇತ್ತೀಚೆಗೆ ಉಡುಪಿಯ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಅಧ್ಯಕ್ಷತೆಯನ್ನು ಹರ್ಷ ಭಾರತಿ ಸೇವಾ ಟ್ರಸ್ಟ್ ಅಧ್ಯಕ್ಷೆ ಭಾರತಿ ಹರೀಶ್ ಸುವರ್ಣ ವಹಿಸಿದ್ದರು. ನಿವೃತ್ತ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಎಕ್ಕಾರು ಮುಖ್ಯ ಅತಿಥಿಯಾಗಿದ್ದರು. ಬಾರಕೂರು ಎನ್.ಆರ್.ದಾಮೋದರ ಶರ್ಮಾ ವಿಶೇಷ ಉಪಾನ್ಯಾಸ ನೀಡಿದರು.
ನಿರಾಶ್ರಿತರ ಆಶ್ರಯಗಳಿಗೆ ತೆರಳಿ ಉಚಿತವಾಗಿ ಕ್ಷೌರ ಸೇವೆ ನೀಡುವ ಸತೀಶ್ ಸುವರ್ಣ ಪಂದುಬೆಟ್ಟು ದಂಪತಿ ಯನ್ನು ಸನ್ಮಾನಿಸಲಾಯಿತು. ಉತ್ತಮ ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಪುರಸ್ಕಾರದೊಂದಿಗೆ ಗೌರವಿಸ ಲಾಯಿತು. ಹರ್ಷ ಭಾರತಿ ಸೇವಾ ಟ್ರಸ್ಟ್‌ನ ಪ್ರವರ್ತಕ ಹರೀಶ್ ಸುವರ್ಣ ದಂಪತಿಯನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಎಸೆಸೆಲ್ಸಿ, ಪಿಯುಸಿ, ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಸುಮಾರು 80 ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯ ಧನ ಹಾಗೂ ಸ್ಕೂಲ್ ಬ್ಯಾಗ್ ವಿತರಿಸಲಾಯಿತು.
ಸಂತ್ರಪ್ತಿ ಪರಿಯಾಳ ಬಳಗದ ಅಧ್ಯಕ್ಷ ಶೇಖರ್ ಸಾಲಿಯಾನ್ ಆದಿಉಡುಪಿ ಟ್ರಸ್ಟಿಗಳಾದ ವಿನಯ್, ಭಾಗ್ಯ ದಂಪತಿ ಹಾಗೂ ಭರತ್, ಜಿಲ್ಲಾ ಪರಿಯಾಳ ಸಮಾಜದ ಅಧ್ಯಕ್ಷ ಸಂದೀಪ್ ಸಾಲಿಯಾನ್, ನಿಕಟ ಪೂರ್ವಧ್ಯಕ್ಷ ಶಂಕರ್ ಸಾಲಿಯಾನ್ ಕಟಪಾಡಿ, ದಕ ಜಿಲ್ಲಾ ಪರಿಯಾಳ ಸಮಾಜದ ಗೌರವಾಧ್ಯಕ್ಷ ರಮೇಶ್ ಬಂಗೇರ ಸೂಟರ್‌ಪೇಟೆ, ಪರಿಯಾಳ ಮಹಾಸಭಾ ಅಧ್ಯಕ್ಷ ಸುನಿಲ್ ಕುಮಾರ್ ಹೆಜಮಾಡಿ, ಪೂರ್ವಧ್ಯಕ್ಷ ಪ್ರವೀಣ್ ಸಾಲಿಯಾನ್ ಕಾವೂರು, ಜಯಂತ್ ಸುವರ್ಣ ಬಜ್ಪೆ, ಚಂದ್ರನಾಥ್ ಸಾಲಿಯಾನ್, ಜಯಕರ ಸಾಲಿಯಾನ್ ಬೆಳುವಾಯಿ ಮೊದಲಾದವರು ಉಪಸ್ಥಿತರಿದ್ದರು.
ಕುಮಾರಿ ನಿಸ್ಮಿತಾ ಸಚ್ಚೆರಿಪೇಟೆ ಪ್ರಾರ್ಥಿಸಿದರು. ಸಾಂತ್ವನ ಪರಿಯಾಳ ಬಳಗದ ಅಧ್ಯಕ್ಷರು ಸದಾಶಿವ ಬಂಗೇರ ಕುರ್ಕಾಲು ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರಶಾಂತ್ ಸಾಲಿಯಾನ್ ನಲ್ಲೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.