×
Ad

ಎಪಿಎಂಸಿಯ ಹಣ್ಣಿನ ಅಂಡಿಗೆ ಬೆಂಕಿ: ಅಪಾರ ಸೊತ್ತು ಹಾನಿ

Update: 2026-06-21 22:30 IST

ಉಡುಪಿ, ಜೂ.21: ಆದಿಉಡುಪಿಯ ಎಪಿಎಂಸಿಯಲ್ಲಿರುವ ಹಣ್ಣಿನ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿ, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ರವಿವಾರ ಬೆಳಗ್ಗೆ ಹಣ್ಣಿನ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಅಂಗಡಿಗೆ ವ್ಯಾಪಿಸಿತು. ಅಂಗಡಿಯಲ್ಲಿ ಸಂಗ್ರಹಿಸಲಾಗಿದ್ದ ಹಣ್ಣು-ಹಂಪಲುಗಳ ಬಾಕ್ಸ್‌ಗಳಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ, ನಿರಂತರ ಕಾರ್ಯಾ ಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಅವಘಡದಿಂದ ಅಂಗಡಿಯೊಳಗೆ ಇದ್ದ ಹಣ್ಣು ಹಂಪಲು, ಟ್ರೇ ಸೇರಿದಂತೆ ಇತರ ಸೊತ್ತುಗಳು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಇದರಿಂದ ಸುಮಾರು 5ಲಕ್ಷ ರೂ. ನಷ್ಟ ಉಂಟಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News