×
Ad

ಪೆರ್ವಾಜೆ ದೇವಳ ಅಧ್ಯಕ್ಷರ ನಕಲಿ ಸಹಿ ಬಳಸಿ ವಂಚನೆಗೆ ಯತ್ನ: ಪ್ರಕರಣ ದಾಖಲು

Update: 2026-06-26 21:46 IST

ಕಾರ್ಕಳ, ಜೂ.26: ಪೆರ್ವಾಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರ ನಕಲಿ ಸಹಿ ಬಳಸಿ ಬ್ಯಾಂಕ್ ಖಾತೆಯಿಂದ ಹಣ ನಗದೀಕರಣ ಮಾಡಲು ಯತ್ನಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಣ್ಣೆಹೊಳೆಯ ಅಕ್ಷಯ ದೇವಾಡಿಗ(29) ಎಂಬಾತ ಪೆರ್ವಾಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2022ರ ಡಿ.1ರಿಂದ 2026ರ ಮೇ 7ರವರೆಗೆ ಡಾಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಲಾಖಾ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಅಕ್ಷಯ ದೇವಾಡಿಗ ಕರ್ತವ್ಯದಲ್ಲಿ ಲೋಪ ಮತ್ತು ಅಕ್ರಮ ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಆ ಬಗ್ಗೆ ವಿವರಣೆಯನ್ನು ಕೇಳಲಾಗಿತ್ತು. ಆದರೆ ಆತ ವಿವರಣೆ ನೀಡದೆ ಯಾವುದೇ ಮಾಹಿತಿ ನೀಡದೆ ಮೇ 7ರಂದು ರಾಜಿನಾಮೆ ಪತ್ರ ನೀಡಿ ಕರ್ತವ್ಯಕ್ಕೆ ಹಾಜಾರಾಗಿರುವುದಿಲ್ಲ.

ಅಕ್ಷಯ ದೇವಾಡಿಗ ದೇವಸ್ಥಾನಕ್ಕೆ ಸಂಬಂಧಿಸಿದ ಬ್ಯಾಂಕ್‌ನಲ್ಲಿ ಚೆಕ್ ಲೀಪ್‌ಗಳನ್ನು ಜೂ.24ರಂದು ನಗದೀಕರಣ ಕ್ಕಾಗಿ ಹಾಜಾರುಪಡಿಸಿದ್ದು, ಆಗ ಬ್ಯಾಂಕ್ ಮೇನೆಜರ್ ಮತ್ತು ಸಿಬ್ಬಂದಿ ಅನುಮಾನ ಬಂದು ಆತನನ್ನು ವಿಚಾರಿಸಿ ದರು. ಆದರೆ ಆತ ಸರಿಯಾದ ವಿವರಣೆ ನೀಡದಿರುವುದರಿಂದ ನಗದೀಕರಣ ಮಾಡಿರುವುದಿಲ್ಲ ಎನ್ನಲಾಗಿದೆ.

ಆರೋಪಿಯು ಖಾಲಿ ಚೆಕ್ ಲೀಪ್‌ಗಳನ್ನು ನಗದೀಕರಣ ಮಾಡಿಸಲು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಭಾಕರ ಬಂಗೇರ ಅವರ ಗಮನಕ್ಕೆ ತಾರದೆ ಅಧ್ಯಕ್ಷರ ಸಹಿಯನ್ನು ನಕಲಿಯಾಗಿ ಮಾಡಿ ಮೋಸ ಮಾಡಲು ಪ್ರಯತ್ನಿಸಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News