ಸ್ಕೂಟರ್‌ಗೆ ಕಾರು ಢಿಕ್ಕಿ: ಸವಾರ ಮೃತ್ಯು
ಕಾಪು, ಜೂ.27: ಕಾರೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡ ಘಟನೆ ಉದ್ಯಾವರ ಬಬ್ಬುಸ್ವಾಮಿ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜೂ.27 ರಂದು ನಸುಕಿನ ವೇಳೆ 1ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಮಂಗಳೂರು ಅಶೋಕನಗರ ನಿವಾಸಿ ಸ್ಕೂಟರ್ ಸವಾರ ಮೋನಿಷ್ ಅಂಚನ್(42) ಎಂದು ಗುರುತಿಸ ಲಾಗಿದೆ. ಇವರ ಸಂಬಂಧಿ ಮರ್ಣೆ ನಿವಾಸಿ ಗೀತೇಶ್ ಕಮಾಲಕ್ಷ ಸಾಲಿಯಾನ್ ಎಂಬವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆಯಿತ್ತೆ ನ್ನಲಾಗಿದೆ. ಇದರ ಪರಿಣಾಮ ಮೋನಿಷ್ ಅಂಚನ್ ಹಾಗೂ ಅವರ ಪತ್ನಿ ಪರಿಣಿತ ಸ್ಕೂಟರ್ ಸಮೇತ ರಸ್ತೆಗೆ ಬಿದ್ದರೆನ್ನಲಾಗಿದೆ.
ಇದರಿಂದ ಪರಿಣಿತ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಮೋನಿಶ್ ಅಂಚನ್ ತೀವ್ರವಾಗಿ ಗಾಯಗೊಂಡರು. ಗಂಭೀರ ಸ್ಥಿತಿಯಲ್ಲಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾದ ಮೋನಿಷ್ ಅಂಚನ್ ಚಿಕಿತ್ಸೆಗೆ ಸ್ಪಂದಿಸದೆ ಬೆಳಗಿನ ಜಾವ 4 ಗಂಟೆಗೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.