×
Ad

ವ್ಯಕ್ತಿ ನಾಪತ್ತೆ

Update: 2026-07-02 22:27 IST

ಹೆಬ್ರಿ, ಜು.2: ತಂದೆಯೊಬ್ಬರು ಮಗನೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದು, ಮನೆಗೆ ಮರಳದೇ ನಾಪತ್ತೆ ಯಾಗಿರುವುದಾಗಿ ಮನೆಯವರು ಹೆಬ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕುಚ್ಚೂರು ಗ್ರಾಮದ ಬಾಗಲ್‌ಜೆಡ್ಡು ನಿವಾಸಿ ಕುಶಾಲ ಶೆಟ್ಟಿ (55) ಇವರು ಯಾವುದೋ ಕಾರಣಕ್ಕೆ ಜೂ.28ರಂದು ಮಗನೊಂದಿಗೆ ಜಗಳವಾಡಿದ್ದು, ಸಿಟ್ಟಿನಲ್ಲಿ ತಾನು ಮನೆ ಬಿಟ್ಟು ಹೋಗುವುದಾಗಿ ತನ್ನ ಓಮ್ನಿ ಕಾರಿನಲ್ಲಿ ಬಟ್ಟೆಬರೆ ಗಳೊಂದಿಗೆ ತೆರಳಿದ್ದರು.

ಆದರೆ ಅವರು ಎಷ್ಟು ಹೊತ್ತಾದರೂ ಮರಳದೇ ಇದ್ದಾಗ ಸಂಬಂಧಿಕರು ಹಾಗೂ ಇತರ ಕಡೆಗಳಲ್ಲಿ ಹುಡುಕಾಟ ನಡೆಸಲಾಯಿತು. ಅವರು ಎಲ್ಲೂ ಪತ್ತೆಯಾಗಲಿಲ್ಲ. ಕೊನೆಗೆ ಪತ್ನಿ ಸುಗಂಧಿ ಶೆಟ್ಟಿ ಗಂಡ ನಾಪತ್ತೆಯಾಗಿರುವ ಬಗ್ಗೆ ಹೆಬ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News