ಖಾಸಗಿ, ಸರಕಾರಿ ಬಸ್ ನಿಲ್ದಾಣಗಳ ನಾಮಫಲಕ ಅಳವಡಿಕೆ
Update: 2026-08-03 19:28 IST
ಕುಂದಾಪುರ, ಆ.3: ಕುಂದಾಪುರ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಅಧ್ಯಕ್ಷರು ಮತ್ತು ಕೆಎಸ್‌ಆರ್‌ಟಿಸಿ ಮ್ಯಾನೇಜರ್ ಸೂಚನೆಯಂತೆ ಹೇರಿಕುದ್ರುವಿನಲ್ಲಿ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ನಿಗದಿತ ಬಸ್ ನಿಲ್ದಾಣ ಎಂಬ ನಾಮಫಲಕವನ್ನು ರವಿವಾರ ಅಳವಡಿಸ ಲಾಯಿತು.
ಇದೇ ವೇಳೆ ಇಲ್ಲಿ ಬೈಂದೂರು, ಕೊಲ್ಲೂರು, ಸಿದ್ದಾಪುರ ಕಡೆಯಿಂದ ಬರುವಂತಹ ಎಲ್ಲ ಬಸ್‌ಗಳನ್ನು ನಿಲ್ಲಿಸುವಂತೆ ಇಲ್ಲಿನ ಜನರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ನಿವೃತ್ತ ಸಿಬಂದಿ ಚಂದ್ರಶೇಖರ ಬಿಲ್ಲವ, ಗ್ರಾಮದ ಪ್ರಮುಖರಾದ ಆಲ್ವಿನ್ ಲೋಬೋ, ಸುರೇಂದ್ರ ಬೆಳಿನಮನೆ, ಆದರ್ಶ ಶೆಟ್ಟಿ, ಸತೀಶ್ ಎಚ್., ಹರೀಶ್ ಪೂಜಾರಿ, ಪ್ರವೀಣ್ ಡಿಸಿಲ್ವಾ, ರಾಮ ಪೂಜಾರಿ ಜಟ್ಟಿಮನೆ, ಸುಧಾಕರ ಶೆಟ್ಟಿ ಮೂಡಾಯಿನ ಮನೆ, ಪಂಜು ಪೂಜಾರಿ, ಕುಮಾರ್ ಮೋಗವೀರ, ರಾಜೀವ ಶೆಟ್ಟಿ, ಮಾರ್ಟಿನ್, ಗ್ಯಾರೆಂಟಿ ಅನುಷ್ಠಾನ ಸಮಿತಿಯ ಸದಸ್ಯ ಅಭಿಜಿತ್ ಪೂಜಾರಿ ಹೇರಿಕುದ್ರು ಮತ್ತಿತರರು ಉಪಸ್ಥಿತರಿದ್ದರು.