ಇಮಾಮ್, ಮೌಝಿನ್‌ಗಳಿಗೆ ಬಾಕಿ ಗೌರವಧನ ಪಾವತಿಗೆ ಆಗ್ರಹ

Update: 2026-08-11 19:29 IST

ಸಾಂದರ್ಭಿಕ ಚಿತ್ರ

ಉಡುಪಿ, ಆ.11: ಕರ್ನಾಟಕ ವಕ್ಫ್ ಮಂಡಳಿಯಲ್ಲಿ ನೋಂದಾಯಿತ ಮಸೀದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಮಾಮ್ ಮತ್ತು ಮೌಝಿನ್‌ಗಳಿಗೆ ವಕ್ಫ್ ಮಂಡಳಿ ನೀಡುತ್ತಿರುವ ಮಾಸಿಕ ಗೌರವ ಧನ ಕಳೆದ ಮೂರು ತಿಂಗಳಿಂದ ಪಾವತಿಯಾಗದೆ ಬಾಕಿ ಇದೆ. ಇದನ್ನು ತಕ್ಷಣ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ಅವರಿಂದು ರಾಜ್ಯ ವಖ್ಫ್ ಮಂಡಳಿ ಅಧ್ಯಕರಿಗೆ ಮತ್ತು ರಾಜ್ಯ ಸಭಾ ಸದಸ್ಯ ನಾಸಿರ್ ಹುಸೇನ್ ಅವರಿಗೆ ಮನವಿ ಸಲ್ಲಿಸಿ, ಕಳೆದ ಮೇ ತಿಂಗಳಿಂದ ರಾಜ್ಯದ್ಯಂತ ಮಸೀದಿಗಳಲ್ಲಿ ಅತ್ಯಲ್ಪ ವೇತನದಲ್ಲಿ ದುಡಿಯುತ್ತಿ ರುವ ಇಮಾಮ್ ಹಾಗೂ ಮೌಝಿನ್‌ಗಳಿಗೆ ಗೌರವ ಧನ ಪಾವತಿಯಾಗದೆ ಆರ್ಥಿಕವಾಗಿ ತೀವ್ರ ತೊಂದರೆಯಾಗಿದೆ. ಸರಕಾರ ಮತ್ತು ವಕ್ಫ್ ಮಂಡಳಿ ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಮೊಯಿದಿನಬ್ಬ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News