ಸುಶಿಕ್ಷಿತ ಸಮಾಜ ಜವಾಬ್ದಾರಿಯುತವಾಗಿ ಸಂವಹನ ಮಾಡಲಿ: ಡಾ.ಸಫಿಯಾ

Update: 2026-08-22 18:37 IST

ಉಡುಪಿ, ಆ.22: ಉತ್ತಮ ಸಂವಹನ ಜವಾಬ್ದಾರಿಯುತ ಮಾತು ಗಳಿಂದ ಬರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಪ್ಪಾಗಿ ಅರ್ಥೈಸುವ ಸಮಾಜದ ಮಧ್ಯೆ ನಾವು ಸುಶಿಕ್ಷಿತ ವ್ಯಕ್ತಿಗಳಾಗಿ ನಮ್ಮ ಮಾತುಗಳಿಗೆ ಜವಾಬ್ದಾರರಾಗಿ ರಬೇಕು ಎಂದು ಉಡುಪಿ ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ಪ್ರಾಧ್ಯಾಪಕಿ ಡಾ.ಸಫಿಯಾ ತಿಳಿಸಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಆಯೋಜಿಸಲಾದ ’ಸಂವಹನ: ಅಭಿವ್ಯಕ್ತಿಯಿಂದ ಜವಾಬ್ದಾರಿಯೆಡೆಗೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಗಾಯತ್ರಿ ಪೈ ಅಧ್ಯಕ್ಷತೆ ವಹಿಸಿದರು. ಉಪಪ್ರಾಂಶುಪಾಲ ಡಾ.ಎಂ.ವಿಶ್ವನಾಥ ಪೈ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಸುಚಿತ್ ಕೋಟ್ಯಾನ್ ಸ್ವಾಗತಿಸಿ, ವಿದ್ಯಾರ್ಥಿನಿ ಅಂಬಿಕಾ ವಂದಿಸಿದರು. ವಿದ್ಯಾರ್ಥಿನಿ ಪ್ರಹನ್ನೇಶ್ವರಿ ಪರಿಚಯಿಸಿ, ಭಾವನಾ ನಾಯ್ಕ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News