ಕುಂದಾಪುರ: ಮಳೆಯಿಂದ ಮನೆಗೆ ಹಾನಿ
ಉಡುಪಿ, ಸೆ.1: ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಕುಂದಾಪುರ ತಾಲೂಕು ಹರ್ಕೂರು ಗ್ರಾಮದ ಮಂಜುನಾಥ ದೇವಾಡಿಗ ಎಂಬವರ ಮನೆ ಸಂಪೂರ್ಣ ಹಾನಿಗೊಂಡಿದ್ದು, ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಸುರಿಯದಿದ್ದರೂ ದಿನದ ಕೆಲವು ಹೊತ್ತು ಸಾಧಾರಣ ಮಳೆಯಾಗುತ್ತಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 17.8ಮಿ.ಮೀ. ಮಳೆಯಾಗಿದೆ.
ಕಾರ್ಕಳದಲ್ಲಿ 18.6ಮಿ.ಮೀ., ಕುಂದಾಪುರದಲ್ಲಿ 19.4, ಉಡುಪಿಯಲ್ಲಿ 17.5, ಬೈಂದೂರಿನಲ್ಲಿ 15.3, ಬ್ರಹ್ಮಾವರ ದಲ್ಲಿ 19.1, ಕಾಪುವಿನಲ್ಲಿ 20.3 ಹಾಗೂ ಹೆಬ್ರಿಯಲ್ಲಿ 14.8ಮಿ.ಮೀ. ಮಳೆಯಾದ ವರದಿ ಬಂದಿದೆ.