ಕಾರ್ಕಳ, ಸೆ.5: ನೀರೆ ಗ್ರಾಮದ ಬಾದಾಮಿಕಟ್ಟೆಯಲ್ಲಿರುವ ಪ್ರಶಾಂತ್ ಎಂಬವರ ಬಾಡಿಗೆ ಮನೆಗೆ ಸೆ.4ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು, ಅಪಾರ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಮನೆಯ ಎದುರಿನ ಬಾಗಿಲು ತೆರೆದು, ಮನೆಯ ಮೇಲ್ಚಾವಣಿಗೆ ಹೋಗುವ ಬಾಗಿಲನ್ನು ಮುರಿದು ಒಳಪ್ರವೇಶಿಸಿದ ಕಳ್ಳರು, ಕಪಾಟಿನಲ್ಲಿಟ್ಟಿದ್ದ ಸುಮಾರು 10 ಗ್ರಾಂ ತೂಕದ 2 ಜೊತೆ ಚಿನ್ನದ ಕಿವಿಯ ಓಲೆ, ಸುಮಾರು 1 ಗ್ರಾಮ್ ತೂಕದ ಚಿನ್ನದ ಮೂಗುತಿ, ಸುಮಾರು 40 ಗ್ರಾಮ್ ತೂಕದ ಒಂದು ಜೊತೆ ಬೆಳ್ಳಿಯ ಕಾಲ್ಗೆಜ್ಜೆ, ಅಂದಾಜು 10 ಗ್ರಾಮ್ ತೂಕದ ಬೆಳ್ಳಿಯ ಬ್ರೆಸ್ಲೆಟ್, ಸುಮಾರು 5 ಗ್ರಾಮ್ ತೂಕದ ಒಂದು ಜೊತೆ ಬೆಳ್ಳಿಯ ಕಿವಿಯ ಓಲೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor