ಕಲಾವಿದ ಶೇಖರ್ ಜಿ.ಅಮೀನ್ ನಿಧನ
ಉಡುಪಿ, ಸೆ.9: ಉಡುಪಿ ಶಿರಿಬೀಡು ಮಠದಬೆಟ್ಟು ಪರಿಸರದ ನಿವಾಸಿ ಶೇಖರ್ ಜಿ.ಅಮೀನ್(75) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.
ಇವರು ಉಡುಪಿ ಸರ್ವಿಸ್ ಬಸ್ ನಿಲ್ದಾಣ ಬಳಿ ಇರುವ ನೆಲ್ಲಿಕಟ್ಟೆಯ ಕಂಬಿಗಾರ ಬಬ್ಬುಸ್ವಾಮಿ ದೈವಸ್ಥಾನ ಸಮಿತಿಯ ಅಧ್ಯಕ್ಷರಾಗಿದ್ದರು. ಶಿರಿಬೀಡಿನ ಬನ್ನಂಜೆಯ ನಾಗಬ್ರಹ್ಮ ಸ್ಥಾನದಲ್ಲಿ ಕಾರ್ಯದರ್ಶಿಯಾಗಿ, ಉಡುಪಿ ಶಿರಿಬೀಡಿನಲ್ಲಿರುವ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ನಾಟಕ ಕಲಾವಿದರಾಗಿದ್ದ ಶೇಖರ್ ಜಿ.ಅಮೀನ್, ಬಯ್ಯ ಮಲ್ಲಿಗೆಯ ಹೀರೋ ಶಶಾಂಕ್ ಪಾತ್ರದಲ್ಲಿ ನಟಿಸಿ ಮಿಂಚಿದ್ದರು. ಮೃತರು ಪತ್ನಿ, ಕುಟುಂಬಸ್ಥರನ್ನು, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ
ಇವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಬನ್ನಂಜೆ, ಕೋಶಾಧಿಕಾರಿ ಗಣೇಶ್‌ರಾಜ್ ಸರಳೆಬೆಟ್ಟು, ಸುಭಾಷ್ ಪೂಜಾರಿ, ಶಾಲಾ-ಕಲಾ ಕಾರ್ಯದರ್ಶಿ ಮುರಳಿಧರ ದೇವಾಡಿಗ ಸಂತಾಪ ಸೂಚಿಸಿದ್ದಾರೆ