ಉಡುಪಿ, ಸೆ.8: ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಅರ್ಪಿಸುವ, ನಾಡಿನ ಹೆಮ್ಮೆಯ ಸಾಹಿತಿ ಡಾ. ಬನ್ನಂಜೆ ಗೋವಿಂದಾಚಾರ್ಯ ರ ಜೀವನಾಧಾರಿತ ‘ಇಂದು ಎನಗೆ ಗೋವಿಂದ’ ಚಲನಚಿತ್ರದ ವಿಶೇಷ ಪ್ರದರ್ಶನ ಗಳು ಸೆ.10ರ ಗುರುವಾರದಂದು ಉಡುಪಿಯ ಗೀತಾ ಮಂದಿರದ ಪುತ್ತಿಗೆ ಮಠದ ನೃಸಿಂಹ ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥರ ಆಶೀರ್ವಾದ ದೊಂದಿಗೆ ಜರಗಲಿದೆ. ಈ ಚಿತ್ರ ಮುಂದೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಗೊಳ್ಳದ ಕಾರಣ ಬನ್ನಂಜೆಯವರ ಅಭಿಮಾನಿಗಳಿಗೆ ಹಾಗೂ ಸಾಹಿತ್ಯ ಪ್ರೇಮಿ ಗಳಿಗೆ ಇದು ಒಂದು ಅಪೂರ್ವ ಅವಕಾಶ.

ಚಿತ್ರವು ಸೆ.10ರಂದು ಬೆಳಗ್ಗೆ 10:00ಕ್ಕೆ, ಅಪರಾಹ್ನ 2:00ಕ್ಕೆ ಹಾಗೂ ಸಂಜೆ 5:30ಕ್ಕೆ ಪ್ರದರ್ಶನಗೊಳ್ಳಲಿದೆ. ಪ್ರವೇಶ ಉಚಿತವಾಗಿದ್ದು, ಸಭಾಂಗಣ ದಲ್ಲಿ ಕೇವಲ 320 ಆಸನಗಳು ಮಾತ್ರ ಲಭ್ಯವಿದೆ. ಆಸಕ್ತರು ತಮ್ಮ ಹೆಸರನ್ನು ಮೊದಲೇ ನೋಂದಾಯಿಸಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಆಸ್ಟ್ರೋ ಮೋಹನ್, ಜನಾರ್ದನ ಕೊಡವೂರು, ರವಿರಾಜ್ ಎಚ್.ಪಿ. ಅವರನ್ನು ಸಂಪರ್ಕಿಸಬಹುದು ಎಂದು ಬನ್ನಂಜೆ ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor