ಉಡುಪಿ, ಸೆ.21:ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ವೇಗದ ಗಾಳಿಯೊಂದಿಗೆ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಬೆಂಗಳರಿನಲ್ಲಿರುವ ಭಾರತೀಯ ಹವಾಮಾನ ಕೇಂದ್ರವು ನೀಡಿದೆ.

ಜಿಲ್ಲೆಯ ಅಲ್ಲಲ್ಲಿ ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೊಂದಿಗೆ ಬಿರು ಮಳೆಯು ಸುರಿಯಲಿದೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವು ಇರಲಿದೆ ಎಂದೂ ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.

ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಉಡುಪಿ ಜಿಲ್ಲೆಯ ಅಲ್ಲಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿದಿರುವ ವರದಿ ಗಳು ಬಂದಿವೆ. ಅರ್ಧ, ಮುಕ್ಕಾಲು ಗಂಟೆಗೆ ಸಮೀತವಾಗಿ ಮಳೆ ಸುರಿದಿದೆ. ಇಂದು ಬೆಳಗ್ಗೆ 8:30 ರವರೆಗೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 4.2ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 10.1, ಉಡುಪಿ-8.2, ಬ್ರಹ್ಮಾವರ 6.2, ಕಾಪು-3.7, ಕಾರ್ಕಳ-2.7, ಬೈಂದೂರು- 2.2, ಕುಂದಾಪುರ-1.6 ಮಿ.ಮೀ. ಮಳೆಯಾದ ವರದಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor