ಶಿರ್ವ, ಸೆ.21: ಶಿರ್ವ ಗ್ರಾಮದ ಶ್ರೀವಿಷ್ಣುಮೂರ್ತಿ ದೇವಸ್ಥಾನ ಸಮೀಪ ಸೆ.20ರಂದು ಕೋಳಿ ಅಂಕ ನಡೆಸುತ್ತಿದ್ದ ಓಂಭತ್ತು ಮಂದಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಸೂಡಾ ಗ್ರಾಮದ ನರೇಂದ್ರ ಪ್ರಭು(61), ಬೆಳ್ಮಣ್ ಗ್ರಾಮದ ಪ್ರಕಾಶ್ ಕಾಮತ್(45), ಇನ್ನಾ ಗ್ರಾಮದ ರಮೇಶ (49), ಜಯ ಪೂಜಾರಿ(64), ಪಾಂಗಾಳದ ರಾಘವೇಂದ್ರ(48), ಶಿರ್ವದ ಜೆರಾಲ್ಡ್ ಮಥಾಯಸ್(67), ನಂದಳಿಕೆಯ ರಮೇಶ್ ಮೂಲ್ಯ(50), ರೋಹಿತ್ ಸರೋಜನ್(26), ಬೋಳದ ಅಶೋಕ(48) ಬಂಧಿತ ಆರೋಪಿಗಳು. ಬಂಧಿತರಿಂದ 10,600ರೂ. ಮೌಲ್ಯದ 13 ಕೋಳಿ ಹುಂಜ ಹಾಗೂ 5 ಕೋಳಿ ಬಾಳು, 2000ರೂ. ನಗದು, 10 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor