ಉಡುಪಿ, ಸೆ.24: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲೂ ಕರಾವಳಿ ಸೇರಿ ದಂತೆ ವಿವಿದೆಡೆ ನಾಲ್ಕೈದು ದಿನಗಳ ಕಾಲ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದರೂ ಉಡುಪಿ ಜಿಲ್ಲೆಯಲ್ಲಿ ಬೈಂದೂರು ಹಾಗೂ ಕುಂದಾಪುರ ತಾಲೂಕುಗಳನ್ನು ಹೊರತುಪಡಿಸಿದರೆ ಉಳಿದೆಡೆ ಅದರ ಪರಿಣಾಮ ಕಂಡು ಬರಲಿಲ್ಲ.

ಕಳೆದ 24 ಗಂಟೆಗಳಲ್ಲಿ ಬೈಂದೂರಿನಲ್ಲಿ 82.9ಮಿ.ಮೀ. ಮಳೆಯಾಗಿದ್ದರೆ, ಕುಂದಾಪುರದಲ್ಲಿ 73.9ಮಿ.ಮೀ. ಮಳೆ ಯಾಗಿತ್ತು. ಹೆಬ್ರಿಯಲ್ಲಿ ಸಾಧಾರಣ ಪ್ರಮಾಣದಲ್ಲಿ 45.1ಮಿ.ಮೀ. ಮಳೆ ಸುರಿದಿದೆ.ಉಳಿದಂತೆ ಬ್ರಹ್ಮಾವರದಲ್ಲಿ 14.9, ಉಡುಪಿ-3.5, ಕಾರ್ಕಳ-2.5 ಹಾಗೂ ಕಾಪು-0.3ಮಿ.ಮೀ. ಮಳೆಯಾಗಿದೆ.

ಇಂದು ಬೆಳಗ್ಗೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿತ್ತು. ಬಳಿಕ ಮಳೆ ನಿಂತರೂ, ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇತ್ತು. ಮಳೆ ಹಾಗೂ ಮಳೆಯ ವಾತಾರಣದಿಂದ ಕಳೆದ ಒಂದೆರಡು ವಾರದಿಂದ ಇದ್ದ ಬಿರುಬಿಸಿಲಿನ ಝಳ ಕಡಿಮೆಯಾಗಿ ಜನರಿಗೆ ನೆಮ್ಮದಿ ತಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor