ಉಡುಪಿ, ಸೆ.29: ಉಡುಪಿಯ ಮಹಾತ್ಮ ಗಾಂಧೀ ಮೆಮೊರಿಯಲ್ ಸಂಧ್ಯಾ ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ ಇತ್ತೀಚೆಗೆ ಹಿಂದಿ ದಿವಸ್ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಬಸ್ರೂರು ಶ್ರೀಶಾರದಾ ಕಾಲೇಜಿನ ಪ್ರಾಂಶುಪಾಲ ಡಾ.ದಯಾನಂದ ಎನ್.ಬಾಯಾರ್ ಮಾತನಾಡಿ, ಹಿಂದಿ ಬಹಳ ಪ್ರಾಚೀನ ಭಾಷೆ. ಹಿಂದಿಯಲ್ಲಿ ಹಲವು ಉತ್ತಮ ಸಾಹಿತ್ಯ ಪ್ರಕಾರಗಳು ರಚಿಸಲ್ಪಟ್ಟಿವೆ. ಹಿಂದಿ ಒಂದು ಭಾವೈಕ್ಯದ ಭಾಷೆ ಹಾಗು ಈ ಭಾಷೆಯು ಎಲ್ಲಾಬಗೆಯ ಜನರನ್ನು ಒಗ್ಗೂಡಿಸುವ ಭಾಷೆಯಾಗಿದೆ ಎಂದರು.

ಹಿಂದಿ ದಿವಸ್‌ನ ಅಂಗವಾಗಿ ಕಾಲೇಜಿನಲ್ಲಿ ಆಶುಭಾಷಣವೇ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಿಜಿಟಲ್ ಯುಗ್ ಮೇ ಹಿಂದಿ ವಿಷಯಕವಾದ ಭಿತ್ತಿಪತ್ರ ಪ್ರದರ್ಶನ ಮತ್ತು ರಂಗೋಲಿಗಳೊಂದಿಗೆ ವಿದ್ಯಾರ್ಥಿಗಳು ಸಭೆಯನ್ನು ಅಲಂಕರಿಸಿದ್ದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ದೇವಿದಾಸ್ ಎಸ್. ನಾಯ್ಕ್ ವಹಿಸಿದ್ದರು. ಹಿಂದಿ ಉಪನ್ಯಾಸಕಿ ಕೃತ್ತಿಕಾ ಪಿ.ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದಿ ಉಪನ್ಯಾಸಕಿ ಸುನೀತಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸ್ವಾತಿ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಮಿತಾಲಿ ವಿನಾಯಕ್ ಪೈ ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿ ಯಥಾರ್ಥ್ ಸುವರ್ಣ ಸ್ಪರ್ಧಾ ವಿಜೇತರ ಪಟ್ಟಿಯನ್ನು ಓದಿದರು. ಅನ್ಸು ಕುಮಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor