ಪ್ರತ್ಯೇಕ ಪ್ರಕರಣ: ಮೂವರು ಆತ್ಮಹತ್ಯೆ
ಕುಂದಾಪುರ, ಅ.6: ವಿಪರೀತ ಕುಡಿಯುವ ಚಟ ಹೊಂದಿದ್ದ ಕಾವ್ರಾಡಿ ಗ್ರಾಮದ ಮೂಡುವಾಲ್ತುರು ನಿವಾಸಿ ಸುಧಾಕರ ಶೆಟ್ಟಿ(48) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಅ.5ರಂದು ರಾತ್ರಿ ವೇಳೆ ಮನೆಯ ಒಳಗಡೆ ಕೋಣೆಯಲ್ಲಿ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಚಿಕ್ಕಮಗಳೂರು ಮೂಲದ ಯಶೋದಮ್ಮ(68) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಅ.5ರಂದು ರಾತ್ರಿ ಮಾಳ ಗ್ರಾಮದಲ್ಲಿರುವ ಮಗಳ ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬೆಳಪು ಗ್ರಾಮದ ಕಾನ ಹತ್ತಿರ ಪಣಿಯೂರು ನಿವಾಸಿ ಯಶೋಧ ಆಚಾರ್ಯ ಎಂಬವರ ಮಗ ಯುವರಾಜ(47) ಎಂಬವರು ಜೀವನದಲ್ಲಿ ಜಗುಪ್ಸೆಗೊಂಡು ಮರಣ ಪತ್ರ ಬರೆದಿಟ್ಟು, ಅ.6ರಂದು ಮುಂಜಾನೆ ಮನೆಯ ಹಿಂಭಾಗದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.