ಸಮುದ್ರ ಪಾಲಾಗಿದ್ದ ಬಾಲಕನ ಮೃತದೇಹ ಪತ್ತೆ
ಪಡುಬಿದ್ರೆ, ಅ.7: ಪಣಂಬೂರು ಬೀಚ್ ಬಳಿ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಬಾಲಕ ಮೃತದೇಹ ಹೆಜಮಾಡಿ ಕೋಡಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಮೃತರನ್ನು ಬೆಳ್ತಂಗಡಿ ಗ್ರಾಮದ ರೆಂಕದ ಗುತ್ತಿ ನಿವಾಸಿ ಶೇಷಪ್ಪ ಎಂಬವರ ಮಗ ಶ್ರೇಯಶ್ ಎಸ್.ಕುಂಭಾರ(14) ಎಂದು ಗುರುತಿಸಲಾಗಿದೆ. ಇವರು ಅ.4ರಂದು ಸಂಜೆ 5:30 ಸುಮಾರಿಗೆ ಪಣಂಬೂರು ಬೀಚ್‌ನಲ್ಲಿ ಆಟವಾಡುವಾಗ ಸಮುದ್ರ ನೀರಿಗೆ ಅಲೆಗೆ ಸಿಲುಕಿ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಮಂಗಳವಾರ ಸಂಜೆಯ ವೇಳೆ ಹೆಜಮಾಡಿ ಕೋಡಿ ಎಂಬಲ್ಲಿರುವ ಬಂದರು ಬಳಿ ಶಾಂಬವಿ ನದಿಯ ದಡದಲ್ಲಿ ಇದ್ದ ಇವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ತಂದೆ ಗುರುತು ಪತ್ತೆಹಚ್ಚಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.