ಉಡುಪಿ, ಅ.7: ಉಡುಪಿ ಜಿಲ್ಲಾ ಸಮಸ್ತ ಸಂಯುಕ್ತ ಖಾಝಿಯಾಗಿ ವಿದ್ವಾಸಂ ಅಲ್‌ಹಾಜ್ ಉಸ್ಮಾನುಲ್ ಫೈಝಿ ತೋಡಾರ್ ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ.

ಅ.9ರ ಶುಕ್ರವಾರ ಸಂಜೆ ಪಲಿಮಾರು ಹಯಾತುಲ್ ಇಸ್ಲಾಂ ಜುಮಾ ಮಸೀದಿ ವಠಾರದಲ್ಲಿ ಅಸಯ್ಯದ್ ಝಯ್ ನುಲ್ ಅಭಿದೀನ್ ಜಿಫ್ರಿ ತಂಗಳ್ ಅಧ್ಯಕ್ಷತೆಯಲ್ಲಿ ನಡೆಯುವ ಖಾಝಿ ಸ್ವೀಕಾರ ಸಮಾರಂಭದಲ್ಲಿ ಅಸ್ಸಯೆದ್ ಅಮೀರ್ ತಂಙಳ್ ಕಿನ್ಯ ದುವಾ ನೇರವೇರಿಸಲಿರುವರು.

ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾನ, ಶೈಖುನಾ ಅಬ್ದುಲ್ಲ ಫೈಝಿ ಕೊಡಗು, ಶೈಖುನಾ ಮುಹಮ್ಮದ್ ಅಝರ್ ಫೈಝಿ ಬೊಲ್ಲೂರು, ಮುಫ್ತಿ ರಫೀಕ್ ಹುದವಿ ಕೋಲಾರಿ, ಅಶ್ರಫ್ ಫೈಝಿ ಕೊಡಗು, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಎಂ.ಎ.ಮೌಲಾ, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಭಾಗವಹಿಸಲಿರುವರು ಎಂದು ಉಡುಪಿ ಜಿಲ್ಲಾ ಸಮಸ್ತ ಸಂಯುಕ್ತ ಜಮಾತ್ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor