ಕಾರ್ಕಳ| ಸಿಡಿಲು ಬಡಿದು ಮನೆಗೆ ಹಾನಿ
ಸಾಂದರ್ಭಿಕ ಚಿತ್ರ
ಉಡುಪಿ, ಅ.17: ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಚಂದಯ್ಯ ಹೆಗ್ಡೆ ಎಂಬವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ವ್ಯಾಪಕ ಹಾನಿ ಸಂಭವಿಸಿದೆ. ಇದರಿಂದ ಸುಮಾರು 40,000ರೂ.ಗಳ ಹಾನಿ ಅಂದಾಜಿಸಲಾಗಿದೆ.
ನಿನ್ನೆ ಮತ್ತು ಇಂದು ಜಿಲ್ಲಾ ದ್ಯಂತ ಸಾಧಾರಣ ಮಳೆಯಾಗಿದೆ. ಇಂದು ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 24.3 ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ ಅತ್ಯಧಿಕ 36.9ಮಿ.ಮಿ ಮಳೆಯಾಗಿದೆ. ಉಳಿದಂತೆ ಉಡುಪಿಯಲ್ಲಿ 30.1, ಕಾರ್ಕಳದಲ್ಲಿ 29.2, ಕುಂದಾಪುರದಲ್ಲಿ 22.3, ಕಾಪುವಲ್ಲಿ 20.0, ಬ್ರಹ್ಮಾವರದಲ್ಲಿ 18.0 ಹಾಗೂ ಹೆಬ್ರಿಯಲ್ಲಿ 8.1ಮಿಮೀ ಮಳೆಯಾದ ವರದಿ ಬಂದಿದೆ.