ಉಡುಪಿ, ಅ.21: ವಿಜಯದಶಮಿ ಪರ್ವಕಾಲದಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ತೆನೆಪೂಜೆ ನಡೆಯಿತು.

ಭತ್ತದ ತೆನೆಯನ್ನು ಪರಂಪರೆಯಂತೆ ಸೋದೆ ಮಠದ ಮುಂಭಾಗದಲ್ಲಿ ಪೂಜಿಸಿ ಚಿನ್ನದ ಪಲ್ಲಕ್ಕಿಯಲ್ಲಿರಿಸಿ ಮಂಗಳ ವಾದ್ಯಗಳೊಂದಿಗೆ ರಥಬೀದಿಯಲ್ಲಿ ಮೆರವಣಿಗೆಯ ಮೂಲಕ ಶ್ರೀಕೃಷ್ಣ ಮಠಕ್ಕೆ ತರಲಾಯಿತು. ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಕೃಷ್ಣ ಗರ್ಭಗೃಹದ ಪೂರ್ವದ ಬಾಗಿಲನ್ನು ತೆರೆದು ಶ್ರೀ ಕೃಷ್ಣನಿಗೆ ಸಮರ್ಪಿಸಿ ಪೂಜಿಸಿ ನಂತರ ಮುಂಭಾ ಗದ ಲಕ್ಷ್ಮೀ ಮಂಟಪದಲ್ಲಿ ಅಷ್ಟಮಠ ಹಾಗೂ ಇತರ ಉಪಮಠಗಳಿಗೆ ತೆನೆ ವಿತರಿಸಲಾಯಿತು.

ನಂತರ ಬಡಗುಮಾಳಿಗೆಗೆ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ತಂದು ಭಕ್ತರಿಗೆ ಹಂಚಿದರು. ಈ ಸಂದರ್ಭ ದಲ್ಲಿ ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಪಾರುಪತ್ಯೆದಾರ ಶ್ರೀಶ ಭಟ್ ಕಡೆಕಾರು, ಮಠದ ಪ್ರಮುಖರು ಮತ್ತು ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor