ಮಣಿಪಾಲ | ಹಾಡಿಯಲ್ಲಿ ಅಸ್ಥಿಪಂಜರದ ಭಾಗಗಳು ಪತ್ತೆ
ಮಣಿಪಾಲ, ಅ.21: ಅನಂತನಗರದ ಮೂರನೇ ಕ್ರಾಸ್‌ನ ಸರಕಾರಿ ಜಾಗದ ಹಾಡಿಯಲ್ಲಿ ಮಾನವ ಅಸ್ಥಿಪಂಜರದ ಕೆಲವು ಭಾಗಗಳು ಇಂದು ಪತ್ತೆಯಾಗಿವೆ.
ಖಾಲಿ ಇರುವ ಜಾಗವನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಮಾನವ ಭಾಗಃಶ ತಲೆ ಬುರುಡೆ, ಕೈ ಮೂಳೆಗಳು ಕಂಡುಬಂದಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂಳೆ ಭಾಗಗಳನ್ನು ಸಂಗ್ರಹಿಸಿ ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.