ಕುಂದಾಪುರ, ಅ.27: ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಕುಂಭಾಶಿ ಗ್ರಾಮದ ರಾಮ(68) ಎಂಬವರು ಹೊಟ್ಟೆನೋವು ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಅ.25ರಂದು ರಾತ್ರಿ ಮನೆಯ ಸ್ಲ್ಯಾಬ್‌ಗೆ ಹೋಗುವ ಮೆಟ್ಟಿಲಿನ ಗ್ರಿಲ್ಸ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಪೆ: ಅಂಬಲಪಾಡಿ ದೆವರಕೆರೆಯ ಮಗನ ಮನೆಯಲ್ಲಿ ವಾಸವಾಗಿದ್ದ ಸುರೇಶ್ ಎಂಬವರ ಪತ್ನಿ ಐರಿನ್ ಮಾಬಿನ್(57) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಅ.26ರಂದು ಮಧ್ಯಾಹ್ನ ಮನೆಯ ರೂಮ್ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor