ಉಡುಪಿ, ಅ.27: ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ಪರಂಪರಾ(ಐ.ಕೆ.ಎಸ್), ನುಕ್ಸರ್ ಎಂಬ ವಿಜ್ಞಾನ ವಿಭಾಗ ಹಾಗೂ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತಮಹಾವಿದ್ಯಾಲಯ ಜಂಟಿ ಸಹಯೋಗ ದೊಂದಿಗೆ ಪರ್ಯಾಯ ಶೀರೂರು ಮಠದ ಆಶ್ರಯ ದಲ್ಲಿ ಜ್ಯೋತಿರ್ವಿಜ್ಞಾನ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಅ.31ರಂದು ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ಭೀಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಂಗಳವಾರ ಕರೆಯಲಾದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9.30ಕ್ಕೆ ರಾಷ್ಟ್ರಿಯ ಸಮ್ಮೇಳನವನ್ನು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ ಉದ್ಘಾಟಿಸ ಲಿರುವರು. ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.(ಡಾ.)ಎಂ.ಎಸ್. ಮೂಡಿತ್ತಾಯರು ಜ್ಯೋತಿರ್ವಿಜ್ಞಾನಮ್’ ಸಂಶೋಧನಪತ್ರಿಕೆಯನ್ನು ಲೋಕಾರ್ಪಣೆಗೊಳಿಸಲಿರುವರು.

ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಜ್ಯೋತಿಷ ಪ್ರಾಧ್ಯಾಪಕ ಪ್ರೊ.ಎ.ಶ್ರೀಪಾದ ಭಟ್ ದಿಕ್ಸೂಚಿ ಭಾಷಣ ಮಾಡಲಿರುವರು. ಬಳಿಕ ಪ್ರಾಚೀನ ಭಾರತೀಯ ಜ್ಯೋತಿಶ್ಶಾಸ್ತ್ರ ಹಾಗೂ ಆಧುನಿಕ ವಿಜ್ಞಾನಕ್ಕೆ ಸಂಬಂಧಿಸಿದಂತೆ 4 ಗೋಷ್ಠಿಗಳು ನಡೆಯಲಿವೆ. ನಿಟ್ಟೆ ವಿವಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮತ್ತು ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದವೂ ಗೋಷ್ಠಿಗಳಲ್ಲಿ ನಡೆಯಲಿದೆ.

ಸಂಜೆ 4:15ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಸಂದೇಶ ನೀಡಲಿರುವರು. ನಿಟ್ಟೆ ವಿವಿ ಕುಲಸಚಿವ ಪ್ರೊ.ಡಾ.ಹರ್ಷ ಹಲಹಳ್ಳಿ ಅಧ್ಯಕ್ಷತೆಯನ್ನು ವಹಿಸಲಿ ರುವರು. ಇದೇ ದಿನ ಗ್ರಹ-ನಕ್ಷತ್ರ ಹಾಗೂ ಪ್ರಾಚೀನ ಆಕಾಶ ವೀಕ್ಷಣಾ ಪದ್ಧತಿಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಶಿರೂರು ಮಠದ ದಿವಾನ ಡಾ.ಉದಯಕುಮಾರ ಸರಳತ್ತಾಯರು, ನಿಟ್ಟೆ ವಿಶ್ವ ವಿದ್ಯಾಲಯದ ಭಾರತೀಯ ಜ್ಞಾನಪರಂಪರಾ ವಿಭಾಗದ ನಿರ್ದೇಶಕ ಡಾ.ಸುಧೀರರಾಜ್ ಕೆ., ನುಕ್ಸರ್ ವಿಜ್ಞಾನ ವಿಭಾಗದ ನಿರ್ದೇಶಕ ಡಾ.ಅನಿರ್ಭಾನ್ ಚಕ್ರವರ್ತಿ, ಉಡುಪಿ ಎಸ್‌ಎಂಎಸ್‌ಪಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಡಾ.ಅಮೃತೇಶಾಚಾರ್ಯ ಡಿ.ಎಸ್., ಜ್ಯೋತಿಷ ವಿಭಾಗದ ಪ್ರಾಧ್ಯಾಪಕ ಪ್ರೊ.ಡಾ.ಡಿ. ಶಿವ ಪ್ರಸಾದ ತಂತ್ರಿ, ಉಡುಪಿಯ ವಾದಿರಾಜ ಸಂಶೋಧನಾ ಕೇಂದ್ರದ ಡಾ.ಬಿ.ಗೋಪಾಲ ಆಚಾರ್ಯ, ಡಾ.ಅಕ್ಷತಾ, ಡಾ.ವರ್ಷ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor