ರಿಕ್ಷಾ ಚಾಲಕ ನಾಪತ್ತೆ
ಕಾಪು, ಅ.31: ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ ಮೂಡಬೆಟ್ಟು ಗ್ರಾಮದ ಮೊಹಮ್ಮದ್ ಹರ್ಷದ್ (24) ಎಂಬವರು ಅ.30ರಂದು ರಾತ್ರಿ ರಿಕ್ಷಾವನ್ನು ಮನೆ ಬಳಿ ನಿಲ್ಲಿಸಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಹರ್ಷದ್, ತನ್ನ ಸಂಬಂಧಿಯೊಬ್ಬರಿಗೆ ಫೋನ್ ಕರೆಯಲ್ಲಿ, ತಾನು ತುಂಬಾ ಸಾಲ ಮಾಡಿದ್ದು, ನನ್ನಿಂದ ಮನೆಯವರಿಗೆ ತೊಂದರೆಯಾಗಿದೆ. ನಾನು ಎಲ್ಲಿಯೋ ದೂರದಲ್ಲಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.