ಉಡುಪಿ, ಅ.31: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಹಾಗೂ ಧಾರುಲ್ ಹುದಾ ಚಾರಿಟಬಲ್ ಟ್ರಸ್ಟ್ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಬ್ರಹ್ಮಾವರ ವಲಯದ ಕೆಮ್ಮಣ್ಣು ಹೊಡೆ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಡಾ.ಯು.ನಿಸಾರ್ ಅಹಮದ್ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿದರು. ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ನಕ್ವಾ ಯಾಹ್ಯ, ದಾರುಲ್ ಹುದಾ ಚಾರಿಟಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಾ.ನಕ್ವಾ ಪರ್ವೇಜ್ ಮದನಿ, ಆಯೋಗದ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಝಫರಿ, ತಾಪಂ ಮಾಜಿ ಸದಸ್ಯ ರಹಮತುಲ್ಲ ಹೊಡೆ, ನಮ್ಮ ನಾಡ ಒಕ್ಕೂಟ ಜೊತೆ ಕಾರ್ಯದರ್ಶಿ ಉಸ್ತಾದ್ ಸಾದಿಕ್, ಗ್ರಾಪಂ ಮಾಜಿ ಸದಸ್ಯ ಇದ್ರಿಸ್ ಹೊಡೆ, ರಫೀಕ್ ಹೊಡೆ ಉಪಸ್ಥಿರಿದ್ದರು.

ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಸಾಹಿರ ಬಾನು ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಮಹಮ್ಮದ್ ಹುಸೇನ್ ಸಾಹೇಬ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಪ್ರತೀಮ ಸ್ವಾಗತಿಸಿ, ಸಹ ಶಿಕ್ಷಕ ಕೃಷ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor