ಕೆರೆಗೆ ಬಿದ್ದು ವೃದ್ಧ ಮೃತ್ಯು
ಕೋಟ, ಅ.31: ನಾಪತ್ತೆಯಾಗಿದ್ದ ವೃದ್ಧರೊಬ್ಬರ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಬ್ರಹ್ಮಾವರ ತಾಲೂಕಿನ ಮೂಡಹಡು ಎಂಬಲ್ಲಿ ನಡೆದಿದೆ.
ಮೂಡಹಡು ಗ್ರಾಮದ ನಿವಾಸಿ ಗಣಪ ಮರಕಾಲ(80) ಎಂಬವರು ಅ.28ರಂದು ರಾತ್ರಿ ಮನೆಯಿಂದ ನಾಪತ್ತೆಯಾ ಗಿದ್ದು, ಹುಡುಕಾಡಿದಾಗ ಅವರ ಮೃತದೇಹವು ಮೂಡಹಡುವಿನ ಹೊಳ್ಕರೆ ಕೆರೆಯಲ್ಲಿ ಅ.30ರಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ. ಇವರು ಆಕಸ್ಮಿಕವಾಗಿ ಅಥವಾ ಇನ್ನಾವುದೋ ಕಾರಣದಿಂದ ಕೆರೆಗೆ ಬಿದ್ದು ಮೃತಪಟ್ಟಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.