ದಾಶರ್ನಿಕರ ಹೋರಾಟದಿಂದ ಅಸ್ಪಶ್ಯತೆ ದೂರ: ಡಾ.ಮೋಹನ್ ಆಳ್ವ
ಬನ್ನಂಜೆ ಬಾಬು ಅಮೀನ್ಗೆ ‘ವಿಶು ಕುಮಾರ್ ಪ್ರಶಸ್ತಿ’ ಪ್ರದಾನ
ಉಡುಪಿ, ನ.1: ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರೊಂದಿಗೆ ವಿಶುಕುಮಾರ್ ದತ್ತಿನಿಧಿ ಸಮಿತಿ ಸಹಯೋಗದಲ್ಲಿ ಸಾಹಿತ್ಯ, ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ದಿವಂಗತ ವಿಶು ಕುಮಾರ್ ಸ್ಮರಣಾರ್ಥ ನೀಡುವ 2026ನೇ ಸಾಲಿನ ವಿಶು ಕುಮಾರ್ ಪ್ರಶಸ್ತಿಯನ್ನು ಜಾನಪದ ವಿದ್ವಾಂಸ, ಸಾಹಿತಿ, ಸಂಶೋಧಕ ಬನ್ನಂಜೆ ಬಾಬು ಅಮೀನ್ ಅವರಿಗೆ ಪ್ರದಾನ ಮಾಡಲಾಯಿತು.
ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಮೂಡಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು,ಒಂದು ಕಾಲದಲ್ಲಿ ಮೂಢ ನಂಬಿಕೆ, ಅಸ್ಪಶ್ಯತೆ, ಮೇಲುಕೀಳು ಎಂಬ ಬೇಧಭಾವ, ಸಮುದಾಯಗಳ ಮಧ್ಯೆ ಸಂಘರ್ಷಗಳು ಸಾಕಷ್ಟು ಇದ್ದವು. ಇಂದು ಅದೆಲ್ಲವೂ ಬಹುತೇಕ ದೂರವಾಗಿದೆ. ಸಾಕಷ್ಟು ಕ್ರಾಂತಿಗಳಾಗಿವೆ. ಇದರಿಂದ ಅಸ್ಪಶ್ಯತೆ ದೂರವಾಗಿ ಸಮಾನತೆ ಬಂತು. ಮೇಲುಕೀಳು ಕಡಿಮೆಯಾಗಿ, ಮಡಿವಂತಿಕೆ ಮಾಯ ವಾಯಿತು. ಇದಕ್ಕೆಲ್ಲ ಕೋಟಿಚೆನ್ನಯ, ಶ್ರೀನಾರಾಯಣಗುರು ಗಳಂತಹ ದಾಶರ್ನಿಕರು ಹೋರಾಟವೇ ಕಾರಣ ಎಂದು ತಿಳಿಸಿದರು.
ಧರ್ಮ ಎಂಬುದು ಒಂದೇ, ಮತಗಳು ಹಲವು. ಅದೇ ರೀತಿ ಜಾತಿಗಳು ಬೇರೆ ಬೇರೆಯಾದರೂ ಸಮಾಜ ಒಂದೇ. ಹಾಗಾಗಿ ಧರ್ಮ ಮತ್ತು ಸಮಾಜದ ಪರಿಕಲ್ಪನೆ ಎಂದಿಗೂ ತಪ್ಪಾಗಬಾರದು. ಬಿಲ್ಲವರು, ಬಂಟರು, ಮೊಗವೀರರು ಒಂದೇ ತಾಯಿ ಮಕ್ಕಳು ಎಂಬ ಹಿರಿಯರ ಮಾತನ್ನು ನಾವು ಸದಾ ನೆನಪಿಟ್ಟುಕೊಂಡು ಜೀವನ ನಡೆಸಬೇಕು. ನಮ್ಮ ಮಧ್ಯೆ ಸಂಘರ್ಷಕ್ಕೆ ಅವಕಾಶ ಮಾಡಿಕೊಡದೆ ಪ್ರೀತಿಯಿಂದ ಒಂದಾಗಿ ಬದುಕಬೇಕು ಎಂದು ಅವರು ಯುವಜನತೆಗೆ ಕಿವಿಮಾತು ಹೇಳಿದರು.
ಸಮಾರಂಭವನ್ನು ಹಿರಿಯ ಸಾಹಿತಿ ಬಿಪಿನ್ ಚಂದ್ರಪಾಲ್ ನಕ್ರೆ ಉದ್ಘಾಟಿಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಂ ಪೂಜಾರಿ ಅಭಿನಂದನಾ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ್ ನೀರ್ಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿಯನ್ನು ಯುವ ಸಾಹಿತಿ ತಜ್ಞಾ ಆರ್. ಅವರಿಗೆ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿನಿದನಿ ಕಿರುಚಿತ್ರ ಸ್ಪರ್ಧೆ, ಜ್ಞಾನ ಮಂಥನ ರಸಪ್ರಶ್ನೆ ಸ್ಪರ್ಧೆ, ವಿಶು ಕಾವ್ಯಾಮೃತ ಕವನ ಸ್ಪರ್ಧೆ ಹಾಗೂ ವಿಶು ವಿಹಂಗಮ ಕೃತಿ ವಿಮರ್ಶೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ವಹಿಸಿದ್ದರು.
ಗೋವಾ ಬಿಲ್ಲವ ಸಂಘದ ಗೌರವಾಧ್ಯಕ್ಷ ಚಂದ್ರ ಹಾಸ ಅಮೀನ್, ಬೆಂಗಳೂರಿನ ವಕೀಲೆ ವಿಜಯಲಕ್ಷ್ಮೀ ವಿಶುಕುಮಾರ್ ಮುಖ್ಯ ಅತಿಥಿ ಗಳಾಗಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಉಡುಪಿ ಯುವವಾಹಿನಿ ಅಧ್ಯಕ್ಷ ವಿನೋದ್ ಮಂಚಿ, ಕಾರ್ಯದರ್ಶಿ ವೀಕ್ಷಿತ್ ಕುಮಾರ್, ದತ್ತಿನಿಧಿ ಸಮಿತಿಯ ಕಾರ್ಯದರ್ಶಿ ರಮೇಶ್ ಪೂಜಾರಿ ಯಡ್ತಾಡಿ ಉಪಸ್ಥಿತರಿದ್ದರು.
ವಿಶು ಕುಮಾರ್ ದತ್ತಿನಿಧಿ ಸಂಚಾಲನಾ ಸಮಿತಿಯ ಸಂಚಾಲಕ ಜಗದೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಸಂಚಾಲಕ ದಯಾನಂದ ಕರ್ಕೇರ ಉಗ್ಗೇಲ್ಬೆಟ್ಟು ಸ್ವಾಗತಿಸಿದರು. ಅಮಿತಾಂಜಲಿ ಕಿರಣ್ ಹಾಗೂ ಕಾರ್ಯಕ್ರಮ ನಿರೂಪಿಸಿದರು.