ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
ಕಾರ್ಕಳ, ನ.1: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಬೈಲೂರು ಬಾಳೆಹಿತ್ಲು ನಿವಾಸಿ ಗಣೇಶ್ ಪೂಜಾರಿ(54) ಎಂಬವರು ಅ.30ರಂದು ರಾತ್ರಿ ವೇಳೆ ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಬ್ಯಾಂಕರ್ ಕಾಲೋನಿಯ ಮಂಜುನಾಥ ಶೆಟ್ಟಿ ಎಂಬವರ ಮಗ ಸುಚೇತನ ಶೆಟ್ಟಿ(38) ಎಂಬವರು ಸೆ.15ರಂದು ಮಂಗಳೂರಿಗೆ ಹೋಗುವುದಾಗಿ ಬೈಕಿನಲ್ಲಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.