ಯಕ್ಷಗಾನ ಕಲಾರಂಗಕ್ಕೆ ‘ಸಾಂಸ್ಕೃತಿಕ ಏಕೀಕರಣ’ ಪ್ರಶಸ್ತಿ
ಉಡುಪಿ, ನ.3: ಕಳೆದ 52 ವರ್ಷಗಳಿಂದ ಕಲೆ, ಶಿಕ್ಷಣ, ಸಂಸ್ಕೃತಿ ಸಮಾಜ ಪರ ಕೆಲಸ ಮಾಡುವ ಯಕ್ಷಗಾನ ಕಲಾರಂಗಕ್ಕೆ ಕಾಂತಾವರ ಕನ್ನಡ ಸಂಘವು ಕೆ.ಬಿ.ಜಿನರಾಜ್ ಹೆಗ್ಡೆ ನೆನಪಿನಲ್ಲಿ ನೀಡುವ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ ಯನ್ನು ನೀಡಿ ಗೌರವಿಸಿದೆ.
ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವದ ದಿನದ ಸಂದರ್ಭದಲ್ಲಿ ಕಾಂತಾವರದ ಕನ್ನಡ ಸಂಘದ ಆವರಣದಲ್ಲಿ ಜರುಗಿದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಈ ಪ್ರಶಸ್ತಿ ಸ್ವೀಕರಿಸಿದರು.
ಕಲಾರಂಗ ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್, ಯು. ವಿಶ್ವನಾಥ ಶೆಣೈ, ನಾರಾಯಣ ಎಂ. ಹೆಗಡೆ, ಮರ್ಣೆ ಉಮೇಶ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.