ಮಣಿಪಾಲ, ನ.11: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದಲ್ಲಿ ಕೆರಟೋಕೋನಸ್ ಕಾಯಿಲೆಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಎರಡು ನೂತನ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಅರ್ಟೆರಿಯನ್ ಕಾರ್ನಿಯಲ್ ಟೊಮೊಗ್ರಫಿ ಮತ್ತು ಟೊಪೊಗ್ರಫಿ ಉಪಕರಣ ಹಾಗೂ ಇಸಿಎಕ್ಸ್‌ಎಲ್ ಯುವಿಆರ್ ರ್ಯಾಪಿಡ್ ಕೊಲಾಜೆನ್ ಕ್ರಾಸ್-ಲಿಂಕಿಂಗ್ ವ್ಯವಸ್ಥೆಗಳನ್ನು ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸುಧಾಕರ್ ಕಂಟಿಪುಡಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಡಾ.ಸುಧಾಕರ್ ಕಂಟಿಪುಡಿ, ಈ ನೂತನ ವ್ಯವಸ್ಥೆಗಳ ಸೇರ್ಪಡೆಯಿಂದ ನಮ್ಮ ನೇತ್ರಶಾಸ್ತ್ರ ವಿಭಾಗದಲ್ಲಿ ಕಾರ್ನಿಯಾ ಸಂಬಂಧಿತ ಸಮಸ್ಯೆಗಳ ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯಗಳು ಇನ್ನಷ್ಟು ಬಲಗೊಂಡಿವೆ. ವಿಶ್ವ ಕೆರಟೋಕೋನಸ್ ದಿನದ ಹಿನ್ನೆಲೆಯಲ್ಲಿ ಇವುಗಳನ್ನು ಉದ್ಘಾಟಿಸುತ್ತಿರು ವುದು, ಈ ಕಾಯಿಲೆ ಹಾಗೂ ಶೀಘ್ರ ರೋಗನಿರ್ಣಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಒಂದು ಅವಕಾಶವೂ ಆಗಿದೆ ಎಂದು ಹೇಳಿದರು.

ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಕೆರಟೋಕೋನಸ್ ಹೆಚ್ಚಾಗಿ ಹದಿಹರೆಯದಲ್ಲಿ ಆರಂಭ ವಾಗುತ್ತದೆ. ಕನ್ನಡಕದ ಪರ್ವ ಆಗಾಗ ಬದಲಾಗುವುದು, ದೃಷ್ಟಿ ಮಸುಕಾ ಗುವುದು ಅಥವಾ ವಿರೂಪಗೊಳ್ಳುವುದು ಮುಂತಾದ ಆರಂಭಿಕ ಲಕ್ಷಣಗಳನ್ನು ಹೆಚ್ಚಿನವರು ಕೇವಲ ಹೊಸ ಕನ್ನಡಕದ ಅಗತ್ಯವೆಂದು ತಪ್ಪಾಗಿ ಭಾವಿಸುತ್ತಾರೆ. ಶೀಘ್ರ ರೋಗನಿರ್ಣಯದಿಂದ ಸಕಾಲಿಕ ಚಿಕಿತ್ಸೆ ಸಾಧ್ಯವಾಗು ವುದರಿಂದ, ಇಂತಹ ಲಕ್ಷಣಗಳನ್ನು ಗಮನಿಸುವ ಪೋಷಕರು ಹಾಗೂ ಯುವಜನರು ನೇತ್ರತಜ್ಞರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.

ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕಾಮತ್, ಕಾರ್ನಿಯಾ ತಜ್ಞೆ ಡಾ.ದೀಕ್ಷಿತಾ ವಿ., ವಿಭಾಗದ ಬೋಧಕ ಸಿಬ್ಬಂದಿ, ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor