ಬ್ರಹ್ಮಾವರ: ಬಟ್ಟೆ ಒಗಣಲು ಹಾಕಿದ ತಂತಿಯನ್ನು ಸ್ಪರ್ಶಿಸಿದ ಪರಿಣಾಮ ವಿದ್ಯುತ್ ಆಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನ.8ರಂದು ಸಂಜೆ 7.30ರ ಸುಮಾರಿಗೆ ಹೇರಾಡಿ ಗ್ರಾಮದ ರಂಗನಕೆರೆ ಎಂಬಲ್ಲಿ ನಡೆದಿದೆ.

ಮೃತರನ್ನು ರಂಗನಕೆರೆಯ ಕೊರಗ ಕಾಲೋನಿಯ ಮಹಾಬಲ ಕೊರಗ (60) ಎಂದು ಗುರುತಿಸಲಾಗಿದೆ. ಇವರು ಸ್ನಾನ ಮುಗಿಸಿಕೊಂಡು ಮನೆಯ ಅಂಗಳದಲ್ಲಿ ಬಟ್ಟೆಯನ್ನು ಒಣಗಿಸಲು ಹಾಕಿದ್ದ ಕಬ್ಬಿಣದ ತಂತಿಯಲ್ಲಿದ್ದ ಬೈರಸ್ ತೆಗೆಯಲು ತಂತಿಯನ್ನು ಮುಟ್ಟಿದರು. ಆಗ ಅವರಿಗೆ ತಂತಿಯಲ್ಲಿದ್ದ ವಿದ್ಯುತ್‌ನಿಂದ ಆಘಾತ ಆಗಿತ್ತೆನ್ನಲಾಗಿದೆ.

ಇದರ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡ ಅವರು ಬ್ರಹ್ಮಾವರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor