ಉಡುಪಿ, ನ.20: ಕಾಪು ವಿಧಾನಸಭಾ ಕ್ಷೇತ್ರದ 80 ಬಡಗುಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ 2.55 ಕೋಟಿ ರೂ. ವಿವಿಧ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಹಾಗೂ 75 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡ ವಿವಿಧ ಕಾಮಗಾರಿಯ ಉದ್ಘಾಟನೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬುಧವಾರ ನೆರವೇರಿಸಿದರು.

80 ಬಡಗುಬೆಟ್ಟು ಗ್ರಾಪಂ ವ್ಯಾಪ್ತಿಯ ಕುಕ್ಕುದಕಟ್ಟೆ ರಸ್ತೆ ಅಭಿವೃದ್ಧಿ - 20 ಲಕ್ಷ, ಗೋಪಾಲ ನಾಯಕ್ ಮನೆ ತನಕ ರಸ್ತೆ ಅಭಿವೃದ್ಧಿ -15 ಲಕ್ಷ, ಶಾಂತಿನಗರ ಸಿಧ್ಧಿ ವಿನಾಯಕ ಸ್ಟೋರ್ಸ್ ಬಳಿ ರಸ್ತೆ ಅಭಿವೃದ್ಧಿ - 25 ಲಕ್ಷ, ರಾಜೀವ ನಗರ ಅಡ್ಡರಸ್ತೆ ಅಭಿವೃದ್ಧಿ - 15 ಲಕ್ಷ ಸೇರಿದಂತೆ ಒಟ್ಟು 75 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಯ ಉದ್ಘಾಟನೆ ನೆರವೇರಿಸಿ ಆರ್ಬಿ ದಶರಥ ನಗರ ರಸ್ತೆ ಅಭಿವೃದ್ಧಿ - 2 ಕೋಟಿ, ರಾಜೀವ ನಗರ ರಸ್ತೆ ಅಭಿವೃದ್ಧಿ - 25 ಲಕ್ಷ, ಆರ್ಬಿ ವೈಶ್ಣವಿ ದೇವಸ್ಥಾನ ಸಂಪರ್ಕ ರಸ್ತೆ ಅಭಿವೃದ್ಧಿ - 15 ಲಕ್ಷ, ಕಬ್ಯಾಡಿ ಲಕ್ಷ್ಮೀ ನಾರಾಯಣ ಪ್ರಭು ಮನೆ ಬಳಿ ರಸ್ತೆ ಅಭಿವೃದ್ಧಿ - 15 ಲಕ್ಷ ಸೇರಿದಂತೆ ಒಟ್ಟು 2 ಕೋಟಿ 55 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಉಪೇಂದ್ರ ನಾಯಕ್, 80 ಬಡಗುಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಕೇಶವ ಕೋಟ್ಯಾನ್, 80 ಬಡಗುಬೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಂದೀಪ್ ಶೆಟ್ಟಿ ಹಾಗೂ ಗ್ರಾಪಂ ಮಾಜಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ಬೊಮ್ಮರಬೆಟ್ಟು ಗ್ರಾಪಂ: ಬೊಮ್ಮರಬೆಟ್ಟು ಗ್ರಾಪಂ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು.

ಮಾಣೈ ಬೋರ್ಗಲ್ಲು ಗುಡ್ಡೆ ರಸ್ತೆ ಅಭಿವೃದ್ಧಿ -20 ಲಕ್ಷ, ಮುರತಗುಡ್ಡೆ ಮುಂಡಜೆ ರಸ್ತೆ ಅಭಿವೃದ್ಧಿ -20 ಲಕ್ಷ, ಷಡಂಗರ ಬೆಟ್ಟು ರಸ್ತೆ ಅಭಿವೃದ್ಧಿ - 20 ಲಕ್ಷ ಸೇರಿದಂತೆ ಒಟ್ಟು 60 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಶೇಖರ್ ಶೆಟ್ಟಿ ಹಿರಿಯಡ್ಕ, ಉದಯ್ ಕುಮಾರ್, ರತ್ನಾಕರ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಬೊಮ್ಮರಬೆಟ್ಟು ಗ್ರಾಪಂ ಮಾಜಿ ಸದಸ್ಯರಾದ ಸುನಿಲ್ ಶೆಟ್ಟಿ, ಗೀತಾ ದಯಾನಂದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor