ಕೋಡಿ| ಎಸೆಸೆಲ್ಸಿಯಲ್ಲಿ ಶೇ.100 ಫಲಿತಾಂಶ: ಅಭಿನಂದನಾ ಕಾರ್ಯಕ್ರಮ

Update: 2026-08-11 20:30 IST

ಕುಂದಾಪುರ: ಕೋಡಿ ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಸ್ಮಾರಕ ಅನುದಾನಿತ ಪ್ರೌಢ ಶಾಲೆಯಲ್ಲಿ 30ವರ್ಷಗಳ ಎಸ್‌ಎಸ್‌ಎಲ್‌ಸಿ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಶೇ.100 ಫಲಿತಾಂಶವನ್ನು ಸಾಧಿಸಿದ ಶಿಕ್ಷಕ ವರ್ಗಕ್ಕೆ ಶಾಲಾ ಆಡಳಿತ ಮಂಡಳಿ ಮತ್ತು ಶಾಲಾ ಅಭಿವೃದ್ದಿ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಅಧ್ಯಕ್ಷತೆಯನ್ನು ಹಾಜಿ ಕೆ.ಮೊಹಿದ್ದೀನ್ ಬ್ಯಾರಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಡಾ.ಜಯಶೀಲ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೋಟೆ ಪ್ರಭಾಕರ, ಕೋಶಾಧಿಕಾರಿ ಕೆ.ಅಬ್ದುಲ್ಲಾ, ಕೋಡಿ ಚಕ್ರೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೋಡಿ ಗೋಪಾಲ ಪೂಜಾರಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶಂಕರ ಪೂಜಾರಿ, ಸಂಜೀವ ಪೂಜಾರಿ, ನಾಗರಾಜ ಕಾಂಚನ್, ಭಾಸ್ಕರ ಪುತ್ರನ್, ತಿಮ್ಮಪ್ಪ ಖಾರ್ವಿ ಮತ್ತು ಪುರಸಭಾ ಸದಸ್ಯೆ ಲಕ್ಷ್ಮಿ ಉಪಸ್ಥಿತರಿದ್ದರು .

ವಿದ್ಯಾರ್ಥಿನಿ ಫರೀದಾ ಸ್ವಾಗತಿಸಿದರು. ದೈಹಿಕ ಶಿಕ್ಷಕ ಇಲಿಯಾಸ್ ವಂದಿಸಿದರು. ಸಹ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News